×
Ad

2024ರಲ್ಲಿ ಇರಾನ್‍ ನಲ್ಲಿ 900ಕ್ಕೂ ಹೆಚ್ಚು ಮಂದಿಗೆ ಗಲ್ಲುಶಿಕ್ಷೆ : ವಿಶ್ವಸಂಸ್ಥೆ

Update: 2025-01-07 22:18 IST

ಸಾಂದರ್ಭಿಕ ಚಿತ್ರ | Photo : PTI

ವಿಶ್ವಸಂಸ್ಥೆ: ಕಳೆದ ವರ್ಷ (2024) ಇರಾನ್‍ನಲ್ಲಿ 31 ಮಹಿಳೆಯರ ಸಹಿತ 901 ಮಂದಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಏಜೆನ್ಸಿ ಮಂಗಳವಾರ ವರದಿ ಮಾಡಿದೆ.

ಹೆಚ್ಚಿನ ಗಲ್ಲುಶಿಕ್ಷೆಗಳು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದೆ. ಪೊಲೀಸ್ ಕಸ್ಟಡಿಯಲ್ಲಿ 22 ವರ್ಷದ ಮಹಿಳೆ ಸಾವನ್ನಪ್ಪಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭ ನಡೆದ ಘರ್ಷಣೆಯಲ್ಲಿ ಮೃತಪಟ್ಟವರು ಹಾಗೂ ರಾಜಕೀಯ ಭಿನ್ನಮತೀಯರೂ ಗಲ್ಲುಶಿಕ್ಷೆಗೆ ಒಳಗಾದವರ ಪಟ್ಟಿಯಲ್ಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News