×
Ad

ಮುಹಮ್ಮದ್ ಸಿನ್ವಾರ್ ಮೃತಪಟ್ಟಿರುವುದನ್ನು ಕೊನೆಗೂ ದೃಢಪಡಿಸಿದ ಹಮಾಸ್

Update: 2025-08-31 21:13 IST

PC: X \ @Marchfoward

ಗಾಝಾ,ಆ.31: ಗಾಝಾದಲ್ಲಿನ ತನ್ನ ಸೇನಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಮೃತಪಟ್ಟಿರುವುದನ್ನು ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ರವಿವಾರ ದೃಢಪಡಿಸಿದೆ.

ಸಿನ್ವಾರ್ ಅವರು ಇಸ್ರೇಲಿ ಪಡೆಗಳ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ಮೇ ತಿಂಗಳಲ್ಲಿ ಘೋಷಿಸಿತ್ತಾದರೂ, ಹಮಾಸ್ ಅದನ್ನು ಈವರೆಗೆ ದೃಢಪಡಿಸಿರಲಿಲ್ಲ.

ಸಿನ್ವಾರ್ ಅವರ ಸಾವಿನ ಕುರಿತ ಯಾವುದೇ ವಿವರಗಳನ್ನು ಹಮಾಸ್ ಒದಗಿಸಿಲ್ಲ. ಆದರೆ ಅವರು ಸಂಘಟನೆಯ ಇತರ ನಾಯಕರ ಜೊತೆಗಿರುವ ಭಾವಚಿತ್ರಗಳನ್ನು ಪ್ರಕಟಿಸಿದ್ದು, ‘ಹುತಾತ್ಮ’ರೆಂದು ಬಣ್ಣಿಸಿದೆ.

ಮುಹಮ್ಮದ್ ಸಿನ್ವಾರ್ ಅವರು ಹಮಾಸ್ ವರಿಷ್ಠ ಯಾಹ್ಯಾ ಸಿನ್ವರ್ ಅವರ ಕಿರಿಯ ಸಹೋದರ. ಯಾಹ್ವಾ ಸಿನ್ವಾರ್ ಅವರು ಇಸ್ರೇಲ್ ದಾಳಿಗೆ ಬಲಿಯಾದ ಬಳಿಕ ಮುಹಮ್ಮದ್ ಸಿನ್ವರ್ ಅವರು ಹಮಾಸ್‌ ನ ಉನ್ನತ ದರ್ಜೆಯ ನಾಯಕರಾಗಿ ಬಡ್ತಿಗೊಂಡಿದ್ದರು.

ಮುಹಮ್ಮದ್ ಸಿನ್ವರ್ ಹತ್ಯೆಯ ಬಳಿಕ ಅವರ ನಿಕಟವರ್ತಿ ಇಝ್ಝ್ ಅಲ್ ದೀನ್ ಹದ್ದಾದ್ ಅವರು ಉತ್ತರ ಗಾಝಾದಲ್ಲಿನ ಹಮಾಸ್‌ ನ ಹೋರಾಟದ ಮೇಲ್ವಿಚಾರಣೆ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News