×
Ad

ನವಾಲ್ನಿ ಸಾವಿನ ತನಿಖೆ ನಡೆಯುತ್ತಿದೆ: ರಶ್ಯ

Update: 2024-02-19 21:54 IST

ಮಾಸ್ಕೋ: ಅಲೆಕ್ಸಿ ನವಾಲ್ನಿಯ ಸಾವಿನ ಕುರಿತ ತನಿಖೆ ನಡೆಯುತ್ತಿದೆ ಎಂದು ರಶ್ಯ ಅಧ್ಯಕ್ಷರ ಕಚೇರಿ ಸೋಮವಾರ ಹೇಳಿದ್ದು, ಅಲೆಕ್ಸಿ ನವಾಲ್ನಿ ಸಾವಿನ ಪ್ರಕರಣದಲ್ಲಿ ರಶ್ಯ ಸರಕಾರವನ್ನು ಹೊಣೆಯಾಗಿಸಬೇಕೆಂಬ ಆಗ್ರಹ ಹಾಸ್ಯಾಸ್ಪದ ಎಂದು ಖಂಡಿಸಿದೆ.

ನವಾಲ್ನಿ ಸಾವಿನ ತನಿಖೆ ಪಾರದರ್ಶಕ ರೀತಿಯಲ್ಲಿ ಮುಂದುವರಿದಿದೆ. ನವಾಲ್ನಿ ಸಾವಿನ ಪ್ರಕರಣದ ಕುರಿತ ಕೀಳುಮಟ್ಟದ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಈ ಮಧ್ಯೆ, ತನ್ನ ಪತಿಯ ಕೆಲಸವನ್ನು ಮತ್ತು ಸ್ವತಂತ್ರ ರಶ್ಯಕ್ಕಾಗಿನ ಹೋರಾಟವನ್ನು ನಾನು ಮುಂದುವರಿಸುತ್ತೇನೆ. ಸ್ವತಂತ್ರ ರಶ್ಯದಲ್ಲಿ ಬದುಕಲು ನಾನು ಬಯಸುತ್ತೇನೆ' ಎಂದು ಅಲೆಕ್ಸಿ ನವಾಲ್ನಿಯ ಪತ್ನಿ ಯೂಲಿಯಾ ನವಲ್ನಾಯಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News