×
Ad

ನೇಪಾಳ; ಬಸ್ಸು ಅಪಘಾತ ಇಬ್ಬರು ಭಾರತೀಯರ ಸಹಿತ 12 ಮಂದಿ ಮೃತ್ಯು

Update: 2024-01-13 22:32 IST

ಕಠ್ಮಂಡು: ನೇಪಾಳದ ಡಾಂಗ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯರ ಸಹಿತ ಕನಿಷ್ಟ 12 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಂಕೆ ಜಿಲ್ಲೆಯ ನೇಪಾಳಗಂಜ್ನಿಂದ ರಾಜಧಾನಿ ಕಠ್ಮಂಡುಗೆ ಪ್ರಯಾಣಿಸುತ್ತಿದ್ದ ಬಸ್ಸು ಡಾಂಗ್ ಜಿಲ್ಲೆಯ ಭಾಲುಬಾಂಗ್ ಬಳಿ ಸೇತುವೆಯಿಂದ ಕೆಳಜಾರಿ ರಾಪ್ತಿ ನದಿಗೆ ಉರುಳಿದೆ. ಮೃತಪಟ್ಟ 12 ಪ್ರಯಾಣಿಕರಲ್ಲಿ ಇಬ್ಬರು ಭಾರತೀಯರು ಹಾಗೂ ಇಬ್ಬರು ಸ್ಥಳೀಯರ ಗುರುತು ಪತ್ತೆಯಾಗಿದೆ. ಉಳಿದ 8 ಮಂದಿಯ ಬಗ್ಗೆ ಮಾಹಿತಿ ದೊರಕಿಲ್ಲ. 22 ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಉಜ್ವಲ್ ಬಹಾದುರ್ ಸಿಂಗ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News