ಹಮಾಸ್ ನ ಹಿರಿಯ ನಾಯಕ ಮುಹಮ್ಮದ್ ಸಿನ್ವಾರ್ ಹತ್ಯೆ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ
Update: 2025-05-28 20:08 IST
ಬೆಂಜಮಿನ್ ನೆತನ್ಯಾಹು, ಮುಹಮ್ಮದ್ ಸಿನ್ವಾರ್ | PC;NDTV
ಗಾಝಾ: ಹಮಾಸ್ ನ ಹಿರಿಯ ನಾಯಕ ಮುಹಮ್ಮದ್ ಸಿನ್ವಾರ್ ರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇತ್ತೀಚೆಗೆ ಗಾಝಾ ಪಟ್ಟಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮುಹಮ್ಮದ್ ಸಿನ್ವಾರ್ ರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.
ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಿದ ನೆತನ್ಯಾಹು, ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಮಾಸ್ ನಾಯಕರ ಪಟ್ಟಿಯಲ್ಲಿ ಸಿನ್ವಾರ್ ಅವರನ್ನು ಸೇರಿಸಿದ್ದಾರೆ. ಮುಹಮ್ಮದ್ ಸಿನ್ವಾರ್ ಅವರು ಕಳೆದ ವರ್ಷ ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರ ಸಹೋದರ.