×
Ad

ಮೂರು ದೇಶಗಳಲ್ಲಿ ಕೋವಿಡ್ ಹೊಸ ರೂಪಾಂತರ ಪತ್ತೆ

Update: 2023-08-18 23:52 IST

ಸಾಂದರ್ಭಿಕ ಚಿತ್ರ.| Photo: PTI

ಜಿನೆವಾ: ಅಮೆರಿಕ, ಇಸ್ರೇಲ್ ಮತ್ತು ಡೆನ್ಮಾರ್ಕ್ ದೇಶಗಳಲ್ಲಿ ಕೋವಿಡ್ ನ ಹೊಸ ರೂಪಾಂತರ ಪತ್ತೆಯಾಗಿದ್ದು ಈ ಬಗ್ಗೆ ನಿಕಟ ನಿಗಾ ವಹಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.

ಬಿಎ.2.86 ಎಂದು ಹೆಸರಿಸಲಾಗಿರುವ ಹೊಸ ರೂಪಾಂತರದ ಸಂಭಾವ್ಯ ಪರಿಣಾಮಗಳ ಬಗ್ಗೆ ಇದುವರೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು 30ಕ್ಕೂ ಅಧಿಕ ಜೀನ್(ವಂಶವಾಹಿ) ರೂಪಾಂತರಗಳನ್ನು ಇದು ಹೊತ್ತೊಯ್ಯುವ ಕಾರಣ ಇದನ್ನು `ಕಣ್ಗಾವಲಿನಲ್ಲಿನ ರೂಪಾಂತರ' ಎಂದು ವರ್ಗೀಕರಿಸಿದೆ.

ಹೊಸ ರೂಪಾಂತರ ಸೋಂಕನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ಮಾಹಿತಿ ನೀಡಿದೆ. ಈ ಮಧ್ಯೆ, ಜುಲೈ 17ರಿಂದ ಆಗಸ್ಟ್ 13ರ ನಡುವಿನ ಅವಧಿಯಲ್ಲಿ ಕೋವಿಡ್-19 ಸೋಂಕಿನ 1.4 ದಶಲಕ್ಷ ಪ್ರಕರಣ ದಾಖಲಾಗಿದ್ದು 2,300ಕ್ಕೂ ಅಧಿಕ ಸಾವಿನ ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News