ಇಸ್ರೇಲ್ ನೌಕಾನೆಲೆಯ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ
Update: 2024-10-14 21:41 IST
ಸಾಂದರ್ಭಿಕ ಚಿತ್ರ (PTI)
ಬೈರುತ್ : ಉತ್ತರ ಇಸ್ರೇಲ್‍ನ ಹೈಫಾ ನಗರದ ಬಳಿಯಿರುವ ನೌಕಾನೆಲೆಯನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಸೋಮವಾರ ಹೇಳಿದೆ.
ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಮುಖಂಡ ಹಸನ್ ನಸ್ರಲ್ಲಾರಿಗೆ ಇದು ಶ್ರದ್ಧಾಂಜಲಿ ಸಮರ್ಪಣೆಯಾಗಿದೆ ಎಂದು ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.