×
Ad

ವೆನೆಝುವೆಲಾ ಕರಾವಳಿಯಲ್ಲಿ ಅಮೆರಿಕ ಯುದ್ಧನೌಕೆಗಳ ಅಕ್ರಮ ನಿಯೋಜನೆ: ಅಧ್ಯಕ್ಷ ನಿಕೋಲಸ್ ಮಡುರೊ ಆರೋಪ

Update: 2025-08-24 22:18 IST

 ನಿಕೋಲಸ್ ಮಡುರೊ | PC :  NDTV 

ಕ್ಯಾರಕಾಸ್, ಆ.24: ಮಾದಕ ವಸ್ತು ಕಳ್ಳಸಾಗಣೆಗೆ ಕಡಿವಾಣ ಹಾಕುವ ಪ್ರಯತ್ನವಾಗಿ ಅಮೆರಿಕವು ವೆನೆಝುವೆಲಾ ಕರಾವಳಿ ಬಳಿ ಮೂರು ಯುದ್ಧ ನೌಕೆಗಳನ್ನು ನಿಯೋಜಿಸಿರುವುದು ವೆನೆಝುವೆಲಾದ ಆಡಳಿತ ಬದಲಾವಣೆಗೆ ನಡೆಸುತ್ತಿರುವ ಕಾನೂನುಬಾಹಿರ ಪ್ರಯತ್ನವಾಗಿದೆ ಎಂದು ಅಧ್ಯಕ್ಷ ನಿಕೋಲಸ್ ಮಡುರೊ ಆರೋಪಿಸಿದ್ದಾರೆ.

ಅವರು ವೆನೆಝುವೆಲಾ ವಿರುದ್ಧ ಬೆದರಿಕೆ ಒಡ್ಡುತ್ತಿದ್ದಾರೆ. ಆಡಳಿತ ಬದಲಾವಣೆ, ಮಿಲಿಟರಿ ದಾಳಿಯು ಅನೈತಿಕ, ಕ್ರಿಮಿನಲ್ ಮತ್ತು ಕಾನೂನುಬಾಹಿರ. ಲ್ಯಾಟಿನ್ ಅಮೆರಿಕಾದ ದೇಶದ ವಿರುದ್ಧ ಆಕ್ರಮಣಕಾರಿ ಕೃತ್ಯಗಳನ್ನು ಮಾಡುವ ಯಾರಾದರೂ ಎಲ್ಲಾ ದೇಶಗಳ ಮೇಲೆ ದಾಳಿ ಮಾಡುತ್ತಿದ್ದಾರೆ' ಎಂದವರು ಖಂಡಿಸಿದ್ದಾರೆ. 2020ರಲ್ಲಿ, ಟ್ರಂಪ್ ಅವರ ಪ್ರಥಮ ಅಧಿಕಾರಾವಧಿಯಲ್ಲಿ ಮಡುರೊ ಹಾಗೂ ವೆನೆಝುವೆಲಾದ ಇತರ ಉನ್ನತ ಅಧಿಕಾರಿಗಳ ವಿರುದ್ಧ ಹಲವಾರು ಆರೋಪಗಳ ಮೇಲೆ ದೋಷಾರೋಪಣೆ ಮಾಡಲಾಗಿದೆ.

ಜಲಮಾರ್ಗದ ಮೂಲಕ ಮಾದಕ ವಸ್ತು ಕಳ್ಳಸಾಗಣೆಯನ್ನು ತಡೆಯಲು ವೆನೆಝುವೆಲಾದ ಬಳಿಯ ಅಂತರಾಷ್ಟ್ರೀಯ ಸಮುದ್ರಕ್ಕೆ ಮೂರು ಕ್ಷಿಪಣಿ ವಿಧ್ವಂಸಕ ಹಡಗುಗಳನ್ನು ಹಾಗೂ 4000 ನೌಕಾಪಡೆಯ ಸೈನಿಕರನ್ನು ರವಾನಿಸಿರುವುದಾಗಿ ಅಮೆರಿಕದ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News