×
Ad

ನೈಜೀರಿಯಾ: ಗುಂಡಿನ ದಾಳಿಯಲ್ಲಿ 50 ಮಂದಿ ಮೃತ್ಯು

Update: 2024-06-10 23:04 IST

ಅಬುಜ : ವಾಯವ್ಯ ನೈಜೀರಿಯಾದ ಯರ್ಗೋಜೆ ಗ್ರಾಮದ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದು ಕನಿಷ್ಠ 50 ಮಂದಿ ಮೃತಪಟ್ಟಿದ್ದು ಹಲವರನ್ನು ಅಪಹರಿಸಲಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಕಟ್ಸಿನಾ ರಾಜ್ಯದ ಕಂಕಾರಾ ಪ್ರಾಂತದಲ್ಲಿರುವ ಯರ್ಗೋಜೆ ನಗರಕ್ಕೆ ಬೈಕ್ನಲ್ಲಿ ನುಗ್ಗಿದ 12ಕ್ಕೂ ಅಧಿಕ ಬಂದೂಕುಧಾರಿಗಳು ಸ್ಥಳೀಯರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿ ಹಲವರನ್ನು ಅಪಹರಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News