×
Ad

ನೈಜೀರಿಯಾ ಶಾಲೆಯಲ್ಲಿ ಬೆಂಕಿ ದುರಂತ ; ಕನಿಷ್ಠ 17 ಮಕ್ಕಳು ಮೃತ್ಯು

Update: 2025-02-06 23:10 IST

ಸಾಂದರ್ಭಿಕ ಚಿತ್ರ

ಅಬುಜ: ವಾಯವ್ಯ ನೈಜೀರಿಯಾದ ಇಸ್ಲಾಮಿಕ್ ಶಾಲೆಯಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಕನಿಷ್ಠ 17 ಮಕ್ಕಳು ಮೃತಪಟ್ಟಿರುವುದಾಗಿ ದೇಶದ ತುರ್ತು ಕಾರ್ಯಪಡೆಯ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಝಂಪಾರ ರಾಜ್ಯದ ಕವೂರ ನಮೋಡ ಜಿಲ್ಲೆಯಲ್ಲಿನ ಶಾಲೆಯಲ್ಲಿ ದುರಂತ ಸಂಭವಿಸಿದಾಗ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು. ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು ಇತರ 18 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಬೆಂಕಿ ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಬಾಯಿಯ ನೈರ್ಮಲ್ಯಕ್ಕೆ ಬಳಸುವ, ಸ್ಥಳೀಯವಾಗಿ `ಕರ' ಎಂದು ಕರೆಯಲಾಗುವ ಮರದ ಕಡ್ಡಿಗಳನ್ನು ಶಾಲೆಯ ಆವರಣದಲ್ಲಿ ರಾಶಿ ಹಾಕಲಾಗಿತ್ತು. ಅದರಿಂದ ಬೆಂಕಿ ಹರಡಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ತುರ್ತು ಕಾರ್ಯಪಡೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News