×
Ad

ದಾಳಿಗೆ ಪ್ರತಿದಾಳಿ ಬೇಡ : ಇರಾನ್‍ಗೆ ಅಮೆರಿಕ ಆಗ್ರಹ

Update: 2024-10-26 20:53 IST

ಸಾಂದರ್ಭಿಕ ಚಿತ್ರ | PC : x.com/ADRIANKennethK1

ವಾಷಿಂಗ್ಟನ್ : ಇಸ್ರೇಲ್ ಮೇಲೆ ಪ್ರತೀಕಾರ ದಾಳಿ ನಡೆಸುವುದನ್ನು ನಿಲ್ಲಿಸಿ ಹಿಂಸಾಚಾರದ ಆವರ್ತವನ್ನು ಕೊನೆಗೊಳಿಸುವಂತೆ ಅಮೆರಿಕ ಶನಿವಾರ ಇರಾನನ್ನು ಆಗ್ರಹಿಸಿದೆ.

ಇಸ್ರೇಲ್ ಮೇಲಿನ ದಾಳಿಯನ್ನು ಇರಾನ್ ನಿಲ್ಲಿಸಿದರೆ ಸಂಘರ್ಷ ಇನ್ನಷ್ಟು ಉಲ್ಬಣಿಸುವುದನ್ನು ತಡೆಯಬಹುದು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಸೀನ್ ಸ್ಯಾವೆಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಶನಿವಾರ ಇರಾನ್‍ನ ಮಿಲಿಟರಿ ನೆಲೆ ಹಾಗೂ ಕ್ಷಿಪಣಿ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. `ಇಸ್ರೇಲ್‍ನ ಪ್ರತಿಕ್ರಿಯೆ ಆತ್ಮರಕ್ಷಣೆಯ ಕಾರ್ಯವಾಗಿದ್ದು ಜನನಿಬಿಡ ಪ್ರದೇಶವನ್ನು ತಪ್ಪಿಸಿ ಮಿಲಿಟರಿ ಗುರಿಗಳ ಮೇಲೆ ಮಾತ್ರ ದಾಳಿ ನಡೆದಿದೆ. ಆದರೆ ಇಸ್ರೇಲ್ ವಿರುದ್ಧದ ಇರಾನ್ ದಾಳಿಯು ಇಸ್ರೇಲ್‍ನ ಅತೀ ಹೆಚ್ಚು ಜನಸಂಖ್ಯೆಯ ನಗರವನ್ನು ಗುರಿಯಾಗಿಸಿತ್ತು' ಎಂದವರು ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕ ಪಾಲ್ಗೊಂಡಿಲ್ಲ. ರಾಜತಾಂತ್ರಿಕತೆಯನ್ನು ವೇಗಗೊಳಿಸುವುದು ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವುದು ನಮ್ಮ ಗುರಿಯಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ರಾಷ್ಟ್ರೀಯ ಭದ್ರತಾ ತಂಡವು ಇತ್ತೀಚಿನ ದಿನಗಳಲ್ಲಿ ಇಸ್ರೇಲ್‍ನೊಂದಿಗೆ ಸಂಪರ್ಕದಲ್ಲಿದ್ದು ನಾಗರಿಕ ಹಾನಿಯ ಕಡಿಮೆ ಅಪಾಯದ ಪ್ರಮಾಣಾನುಗುಣವಾದ ಪ್ರತಿದಾಳಿ ನಡೆಸಲು ಉತ್ತೇಜಿಸಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News