×
Ad

ಇಸ್ರೇಲ್ ಪ್ರಧಾನಿ ಬೆಂಜಮಿನ್ ರನ್ನು ಭೇಟಿಯಾದ ಅಜಿತ್ ಧೋವಲ್

Update: 2024-03-12 22:43 IST

Photo: X/@IsraeliPM

ಜೆರುಸಲೇಂ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿ ಪ್ರಸಕ್ತ ಪ್ರಾದೇಶಿಕ ವಿದ್ಯಮಾನಗಳು ಹಾಗೂ ವಿನಾಶಕಾರಿ ಮಟ್ಟದಲ್ಲಿ ಆಹಾರದ ಅಭದ್ರತೆಯನ್ನು ಎದುರಿಸುತ್ತಿರುವ ಗಾಝಾದಲ್ಲಿ ಲಕ್ಷಾಂತರ ಸಂತ್ರಸ್ತರಿಗೆ ಮಾನವೀಯ ನೆರವನ್ನು ಪೂರೈಕೆ ಮಾಡುವ ಬಗ್ಗೆ ಚರ್ಚಿಸಿದರು.

ಈ ಬಗ್ಗೆ ಇಸ್ರೇಲ್ ಪ್ರಧಾನಿಯವರ ಕಾರ್ಯಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಒತ್ತೆಯಾಳುಗಳ ಬಿಡುಗಡೆಗೆ ತೀವ್ರ ಪ್ರಯತ್ನ ನಡೆಸಲು ಹಾಗೂ ಮಾನವೀಯ ನೆರವನ್ನು ಒದಗಿಸುವ ಬಗ್ಗೆ ಇತ್ತಂಡಗಳು ಚರ್ಚಿಸಿವೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News