×
Ad

ಇಸ್ರೇಲ್ ದಾಳಿಯಲ್ಲಿ ಇರಾನಿನ ಪರಮಾಣು ವಿಜ್ಞಾನಿ ಮೃತ್ಯು: ವರದಿ

Update: 2025-06-24 21:50 IST

Photo : NDTV

ಟೆಹ್ರಾನ್: ಉತ್ತರ ಟೆಹ್ರಾನಿನ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಪರಮಾಣು ವಿಜ್ಞಾನಿ ಮುಹಮ್ಮದ್ ರೆಝಾ ಸೆಡಿಘಿ ಸಬೆರ್ ಸಾವನ್ನಪ್ಪಿರುವುದಾಗಿ ಇರಾನಿನ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಸಬೆರ್ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಉನ್ನತ ಅಧಿಕಾರಿಯೂ ಆಗಿದ್ದರು. ಅವರ ನೇತೃತ್ವದ ತಂಡ ಸ್ಫೋಟಕ ಸಂಶೋಧನೆ ಮತ್ತು ಪರಮಾಣು ಸಂಬಂಧಿತ ಚಟುವಟಿಕೆಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿತ್ತು ಎಂದು ವರದಿಯಾಗಿದ್ದು 2025ರಲ್ಲಿ ಅಮೆರಿಕದ ಹಣಕಾಸು ಇಲಾಖೆ ಅವರ ಮೇಲೆ ನಿರ್ಬಂಧ ಜಾರಿಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News