ಇರಾಕ್ | ಕ್ಲೋರಿನ್ ಗ್ಯಾಸ್ ಸೋರಿಕೆ : 600ಕ್ಕೂ ಹೆಚ್ಚು ಯಾತ್ರಿಕರು ಅಸ್ವಸ್ಥ
Update: 2025-08-10 23:12 IST
ಸಾಂದರ್ಭಿಕ ಚಿತ್ರ | PC - ndtv
ಬಗ್ದಾದ್, ಆ.10: ಇರಾಕ್‌ನಲ್ಲಿ ನೀರಿನ ಸಂಸ್ಕರಣೆ ಕೇಂದ್ರದಲ್ಲಿ ಕ್ಲೋರಿನ್ ಸೋರಿಕೆಯಾದ ಪರಿಣಾಮವಾಗಿ ಉಸಿರಾಟದ ಸಮಸ್ಯೆಯಿಂದಾಗಿ 600ಕ್ಕೂ ಹೆಚ್ಚು ಯಾತ್ರಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಮಧ್ಯ ಇರಾಕ್‌ನ ನಜಾಫ್ ಮತ್ತು ದಕ್ಷಿಣ ಇರಾಕ್‌ನ ಕಾರ್ಬಾಲಾದ ಎರಡು ಪವಿತ್ರ ಶಿಯಾ ನಗರಗಳ ನಡುವಿನ ಮಾರ್ಗದಲ್ಲಿ ಶನಿವಾರ ತಡರಾತ್ರಿ ದುರಂತ ಸಂಭವಿಸಿದೆ. `ಕಾರ್ಬಾಲದಲ್ಲಿ ಕ್ಲೋರಿನ್ ಅನಿಲ ಸೋರಿಕೆಯ ನಂತರ ಉಸಿರಾಟದ ಸಮಸ್ಯೆಯ 621 ಪ್ರಕರಣಗಳು ದಾಖಲಾಗಿವೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ಇರಾಕ್‌ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.