×
Ad

ಇಸ್ರೇಲ್ ಮೇಲೆ ಹಿಜ್ಬುಲ್ಲಾದಿಂದ 90ಕ್ಕೂ ಅಧಿಕ ರಾಕೆಟ್ ಗಳಿಂದ ದಾಳಿ

Update: 2024-11-11 21:06 IST

ಸಾಂದರ್ಭಿಕ ಚಿತ್ರ (PTI)

ಟೆಲ್ ಅವೀವ್ : ಲೆಬನಾನ್ ನಿಂದ ಹಿಜ್ಬುಲ್ಲಾ ಇಸ್ರೇಲ್ ನ ಹೈಫಾಗೆ 90ಕ್ಕೂ ಅಧಿಕ ರಾಕೆಟ್ ಗಳಿಂದ ದಾಳಿ ಮಾಡಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಸೋಮವಾರ ಮಧ್ಯಾಹ್ನ ಗಲಿಲೀ ಮತ್ತು ಹೈಫಾ ಕೊಲ್ಲಿ ಪ್ರದೇಶದ ಎರಡು ಬ್ಯಾರೇಜ್ ಗಳಲ್ಲಿ ಸುಮಾರು 90ಕ್ಕೂ ಅಧಿಕ ರಾಕೆಟ್ ಗಳ ಮೂಲಕ ಹಿಜ್ಬುಲ್ಲಾ ದಾಳಿ ನಡೆಸಿದೆ. ಇದರಿಂದ ಆಸ್ತಿ-ಪಾಸ್ತಿ ಮತ್ತು ವಾಹನಗಳಿಗೆ ಹಾನಿಯನ್ನುಂಟುಮಾಡಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಹೆಚ್ಚಿನ ರಾಕೆಟ್ ಗಳ ದಾಳಿಯನ್ನು ತಡೆಯಲಾಗಿದೆ ಎಂದು IDF ಮಾಹಿತಿ ನೀಡಿದೆ.

ಮೊದಲ ಬ್ಯಾರೇಜ್ ನಲ್ಲಿ 80 ರಾಕೆಟ್ ಗಳನ್ನು ಉಡಾವಣೆ ಮಾಡಲಾಗಿದೆ. ಎರಡನೇ ಬ್ಯಾರೇಜ್ ನಲ್ಲಿ 10 ರಾಕೆಟ್ ಗಳನ್ನು ಉಡಾವಣೆ ಮಾಡಲಾಗಿದೆ ಎಂದು ಹಿಜ್ಬುಲ್ಲಾಗೆ ಆಪ್ತವಾಗಿರುವ ಲೆಬನಾನಿನ ಅಲ್-ಮಯಾದೀನ್ ನೆಟ್ವರ್ಕ್ (Al-Mayadeen network) ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News