×
Ad

ಅಮೆರಿಕದ ಡೆಮಾಕ್ರಟಿಕ್ ಸಂಸದನಿಗೆ ಕೈಕೋಳ ತೊಡಿಸಿದ ಭದ್ರತಾ ಏಜೆಂಟರು!

Update: 2025-06-13 21:25 IST

Photo: X/@MayorOfLA

ವಾಷಿಂಗ್ಟನ್: ಆಂತರಿಕ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ನಡೆಸುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಮಧ್ಯ ಪ್ರವೇಶಿಸಿ ಪ್ರಶ್ನೆ ಕೇಳಲು ಪ್ರಯತ್ನಿಸಿದ ಅಮೆರಿಕದ ಡೆಮಾಕ್ರಟಿಕ್ ಸಂಸದ ಅಲೆಕ್ಸ್ ಪಡಿಲ್ಲಾರನ್ನು ಹಾಲ್‍ ನಿಂದ ಬಲವಂತವಾಗಿ ಹೊರಗೆ ಕರೆದೊಯ್ದು ನೆಲಕ್ಕೆ ಒತ್ತಿ ಹಿಡಿದು ಕೈಕೋಳ ತೊಡಿಸಿದ ಘಟನೆ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯನ್ನು ವಿರೋಧಿಸಿ ಲಾಸ್ ಏಂಜಲೀಸ್‍ನಲ್ಲಿ ವಲಸಿಗರು ನಡೆಸಿದ ಪ್ರತಿಭಟನೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚರ್ಚೆ ನಡೆಸುತ್ತಿದ್ದ ಸಂದರ್ಭ ಎದ್ದು ನಿಂತ ಅಲೆಕ್ಸ್ ಪಡಿಲಾ `ನಾನು ಸಂಸದ. ಭದ್ರತಾ ಕಾರ್ಯದರ್ಶಿಯವರಲ್ಲಿ ನನ್ನದೊಂದು ಪ್ರಶ್ನೆಯಿದೆ' ಎಂದು ಹೇಳಿದಾಗ ಅವರನ್ನು ಭದ್ರತಾ ಸಿಬ್ಬಂದಿ ಬಲವಂತವಾಗಿ ಅಲ್ಲಿಂದ ಹೊರಗೆ ಕರೆದುಕೊಂಡು ಹೋದರು ಎಂದು ವರದಿಯಾಗಿದೆ. ಅಲೆಕ್ಸ್ ಪಡಿಲಾರನ್ನು ನೆಲಕ್ಕೆ ಒತ್ತಿಹಿಡಿದ ಭದ್ರತಾ ಸಿಬ್ಬಂದಿ ಅವರಿಗೆ ಕೈಕೋಳ ತೊಡಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News