ಅರೇಬಿಯನ್ ಸಮುದ್ರದಲ್ಲಿ ಬಂದರು ನಿರ್ಮಾಣ : ಅಮೆರಿಕಾಕ್ಕೆ ಪಾಕಿಸ್ತಾನದ ಆಹ್ವಾನ
Update: 2025-10-04 23:27 IST
PC - indiatoday
ಇಸ್ಲಮಾಬಾದ್, ಅ.4: ಅರೇಬಿಯನ್ ಸಮುದ್ರದಲ್ಲಿ ಬಂದರು ನಿರ್ಮಿಸಿ ಅದನ್ನು ನಿರ್ವಹಿಸಲು ಪಾಕಿಸ್ತಾನದ ಅಧಿಕಾರಿಗಳು ಅಮೆರಿಕವನ್ನು ಸಂಪರ್ಕಿಸಿರುವುದಾಗಿ `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.
ಬಲೂಚಿಸ್ತಾನದ ಗ್ವದರ್ ಜಿಲ್ಲೆಯ ಪಾಸ್ನಿ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಸ್ತಾವಿತ ಟರ್ಮಿನಲ್ ಅಮೆರಿಕಾಕ್ಕೆ ಪಾಕಿಸ್ತಾನದ ನಿರ್ಣಾಯಕ ಖನಿಜಗಳ ವ್ಯಾಪಕ ನಿಕ್ಷೇಪಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ವರದಿ ಹೇಳಿದೆ.