×
Ad

ಪಾಕ್ ನ್ಯಾಯವಾದಿ ಮತ್ತೆ ಬಂಧನ

Update: 2023-08-28 22:47 IST

ಇಸ್ಲಮಾಬಾದ್, ಆ.28: ದೇಶದ್ರೋಹ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾನವ ಹಕ್ಕುಗಳ ನ್ಯಾಯವಾದಿ ಇಮಾನ್ ಮಝಾರಿಗೆ ಇಸ್ಲಮಾಬಾದ್ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದರೂ, ಜೈಲಿನ ಹೊರಗೆ ಆಕೆಯನ್ನು ಪಾಕಿಸ್ತಾನ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಮಾಜಿ ಸಚಿವೆ ಶಿರೀನ್ ಮಝಾರಿಯ ಪುತ್ರಿಯಾಗಿರುವ ಇಮಾನ್ ಮಝಾರಿಯನ್ನು ಪಷ್ತೂನ್ ಜನಾಂಗದ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿರುವ `ಪಷ್ತೂನ್ ತಹಫುಝ್ ಮೂವ್ಮೆಂಟ್' ಆಯೋಜಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧಿಸಲಾಗಿತ್ತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದ ಇಮಾನ್, ಸೇನಾ ವ್ಯವಸ್ಥೆಯನ್ನು ಟೀಕಿಸಿದ್ದರು.

ಧರಣಿ ಪ್ರತಿಭಟನೆ ಆಯೋಜಿಸಿ ಸರಕಾರದ ಕಾರ್ಯವ್ಯವಹಾರಗಳಿಗೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿತ್ತು. ಆಗಸ್ಟ್ 21ರಂದು ದೇಶದ್ರೋಹ ಆರೋಪದಡಿ ಇಮಾನ್ ಮಝಾರಿಗೆ ಮೂರು ದಿನದ ಪೊಲೀಸ್ ಕಸ್ಟಡಿ ವಿಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News