ಪ್ರಧಾನಿಯ ಸಲಹೆಗಾರನ ವಜಾಕ್ಕೆ ಪಾಕ್ ಚುನಾವಣಾ ಆಯೋಗ ಸೂಚನೆ
Update: 2023-12-20 23:07 IST
Photo Credit: AFP
ಇಸ್ಲಮಾಬಾದ್: ಪ್ರಮುಖ ರಾಜಕೀಯ ಪಕ್ಷದ ಜತೆ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ಪ್ರಧಾನಿಯ ಸಲಹೆಗಾರರನ್ನು ಪದಚ್ಯುತಗೊಳಿಸುವಂತೆ ಪಾಕಿಸ್ತಾನದ ಚುನಾವಣಾ ಆಯೋಗ ಸೂಚಿಸಿದೆ.
ಪಾರದರ್ಶಕವಾಗಿ ಚುನಾವಣೆ ನಡೆಯಬೇಕೆಂಬ ಉದ್ದೇಶದಿಂದ ಉಸ್ತುವಾರಿ ಸರಕಾರ ರಚನೆಯಾಗಿದೆ. ಆದರೆ ಉಸ್ತುವಾರಿ ಪ್ರಧಾನಿಯ ಸಲಹೆಗಾರ ಅಹಾದ್ ಚೀಮಾ ಪ್ರಮುಖ ರಾಜಕೀಯ ಪಕ್ಷವಾದ ಪಾಕಿಸ್ತಾನ್ ಮುಸ್ಲಿಮ್ ಲೀಗ್ -ನವಾಝ್(ಪಿಎಂಎಲ್-ಎನ್) ಪಕ್ಷದ ಜತೆ ನಿಕಟ ಸಂಬಂಧ ಹೊಂದಿದ್ದಾರೆ. ಚುನಾವಣೆ ಪಾರದರ್ಶಕ ರೀತಿಯಲ್ಲಿ ನಡೆಯಬೇಕಿದ್ದರೆ ಇವರನ್ನು ಪದಚ್ಯುತಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ಖಾನ್ ಸರಕಾರ ಅಹಾದ್ ಚೀಮಾರನ್ನು ಜೈಲಿಗೆ ಹಾಕಿತ್ತು. ಆದರೆ ಶಹಬಾಝ್ ಷರೀಫ್ ನೇತೃತ್ವದ ಸರಕಾರ ಚೀಮಾರನ್ನು ದೋಷಮುಕ್ತಗೊಳಿಸಿತ್ತು. ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ.