ಬಾಂಗ್ಲಾಕ್ಕೆ ಭೇಟಿ ನೀಡಿದ ಪಾಕ್ ಐಎಸ್‍ಐ ಮುಖ್ಯಸ್ಥ
Update: 2025-01-23 21:50 IST
ಸಾಂದರ್ಭಿಕ ಚಿತ್ರ | PC : NDTV
ಇಸ್ಲಮಾಬಾದ್ : ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್‍ಐ ಮುಖ್ಯಸ್ಥ ಲೆ|ಜ| ಆಸಿಮ್ ಮಲಿಕ್ ಮಂಗಳವಾರ ಬಾಂಗ್ಲಾದೇಶದ ಢಾಕಾಕ್ಕೆ ಭೇಟಿ ನೀಡಿದ್ದಾರೆ ಎಂದು `ದಿ ಇಕನಾಮಿಕ್ ಟೈಮ್ಸ್' ವರದಿ ಮಾಡಿದೆ.
ಎರಡು ದೇಶಗಳ ನಡುವಿನ ಗುಪ್ತಚರ ಏಜೆನ್ಸಿಗಳ ನಡುವೆ ಮಾಹಿತಿ ಹಂಚಿಕೆ ನೆಟ್‍ವರ್ಕ್ ಸೃಷ್ಟಿಸುವ ಉದ್ದೇಶದಿಂದ ಮಲಿಕ್ ಅವರ ಭೇಟಿಯನ್ನು ಯೋಜಿಸಲಾಗಿದೆ. ಢಾಕಾದಲ್ಲಿ ಮಲಿಕ್‍ರನ್ನು ಬಾಂಗ್ಲಾದೇಶ ಸೇನೆಯ ಉನ್ನತ ಅಧಿಕಾರಿ ಲೆ|ಜ| ಮುಹಮ್ಮದ್ ಫೈಝರ್ ರಹ್ಮಾನ್ ಸ್ವಾಗತಿಸಿದರು. ಇಬ್ಬರು ಜನರಲ್‍ಗಳು ಬಲವಾದ ರಕ್ಷಣಾ ಸಂಬಂಧಗಳ ಅಗತ್ಯವನ್ನು ಒತ್ತಿಹೇಳಿದರು. ಬಾಂಗ್ಲಾ ಮತ್ತು ಪಾಕಿಸ್ತಾನಗಳ ನಡುವಿನ ನಿರಂತರ ಪಾಲುದಾರಿಕೆಯು `ಬಾಹ್ಯ ಪ್ರಭಾವಗಳ' ವಿರುದ್ಧ ಚೇತರಿಸಿಕೊಳ್ಳಬೇಕೆಂದು ಪ್ರತಿಪಾದಿಸಿದರು ಎಂದು ವರದಿ ಹೇಳಿದೆ.