ಅಮೆರಿಕದ ರಾಜಕಾರಣಿಗಳು ಇಸ್ರೇಲ್‍ನಿಂದ ಲಂಚ ಪಡೆದಿದ್ದಾರೆ : ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಆರೋಪ
Update: 2025-09-17 21:51 IST
ಖವಾಜಾ ಆಸಿಫ್ | PC : ddnews.gov.in
ಇಸ್ಲಮಾಬಾದ್, ಸೆ.17: ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂಷಿಸುತ್ತಿದ್ದಾರೆ. ಆದರೆ ಅಮೆರಿಕನ್ನರು ಇಸ್ರೇಲ್‌ನಿಂದ ಬಹಿರಂಗವಾಗಿ ಲಂಚ ಪಡೆಯುತ್ತಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ವಿಲಕ್ಷಣ ಹೇಳಿಕೆ ನೀಡಿದ್ದಾರೆ.
ಲಂಚ ಪಡೆಯುತ್ತಿರುವುದಾಗಿ ನಮ್ಮನ್ನು ಅವಮಾನಿಸಲಾಗುತ್ತಿದೆ. ಆದರೆ, ಅಮೆರಿಕಾದ ರಾಜಕಾರಣಿಗಳು ಬಹಿರಂಗವಾಗಿ ಇಸ್ರೇಲ್‍ನಿಂದ ಲಂಚ ಪಡೆಯುತ್ತಿದ್ದಾರೆ. ಇದು ಭ್ರಷ್ಟಾಚಾರದ ಅಂತಾರಾಷ್ಟ್ರೀಯ ಗ್ರಹಿಕೆಯಲ್ಲಿ ಎರಡು ಮಾನದಂಡವನ್ನು ತೋರಿಸುತ್ತದೆ. ಒಂದು ವೇಳೆ ನಾನು ಲಂಚ ಪಡೆಯುವುದೇ ಆದರೆ ಹೊರಗಡೆ ಸ್ವೀಕರಿಸುತ್ತೇನೆ' ಎಂದು `ಜಿಯೊ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.