×
Ad

ಫೆ.8ಕ್ಕೆ ಪಾಕ್ ಚುನಾವಣೆ: ಆಯೋಗ ಸ್ಪಷ್ಟನೆ

Update: 2023-11-03 23:20 IST

Photo: NDTV

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಮುಂದಿನ ವರ್ಷದ ಫೆಬ್ರವರಿ 8ರಂದು ನಡೆಯಲಿದೆ ಎಂದು ಪಾಕ್ ಚುನಾವಣಾ ಆಯೋಗ ಶುಕ್ರವಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಫೆಬ್ರವರಿ 11ಕ್ಕೆ ನಡೆಯಲಿದೆ ಎಂದು ಗುರುವಾರ ಚುನಾವಣಾ ಆಯೋಗದ ಅಧಿಕಾರಿ ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದ್ದರು. ಆದರೆ ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಅಧ್ಯಕ್ಷ ಆರಿಫ್ ಆಲ್ವಿಯ ನಡುವೆ ನಡೆದ ಸಭೆಯಲ್ಲಿ ಫೆಬ್ರವರಿ 8ರ ದಿನವನ್ನು ಅಂತಿಮಗೊಳಿಸಲಾಗಿದೆ ಎಂದು ಆಯೋಗ ಶುಕ್ರವಾರ ಸ್ಪಷ್ಟನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News