×
Ad

ಪಾಕಿಸ್ತಾನ | ಫಿರಂಗಿ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ಮೂವರು ಮೃತ್ಯು

Update: 2025-08-14 21:06 IST

ಪೇಷಾವರ, ಆ.14: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಮಮುಂಡ್ ನಗರದಲ್ಲಿ ಫಿರಂಗಿ ಗುಂಡೊಂದು ಮನೆಗೆ ಬಡಿದು ಇಬ್ಬರು ಮಕ್ಕಳು ಹಾಗೂ ಅವರ ತಾಯಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಕೆಲ ದಿನಗಳಿಂದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ಫಿರಂಗಿ ಗುಂಡಿನ ದಾಳಿಗೆ ಯಾರು ಹೊಣೆ ಎಂಬುದು ಸ್ಪಷ್ಟಗೊಂಡಿಲ್ಲ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News