×
Ad

ಪಾಕಿಸ್ತಾನ: ಸಿಡಿಲಿಗೆ ಮೂವರು ಮಕ್ಕಳ ಸಹಿತ 14 ಮಂದಿ ಬಲಿ

Update: 2024-04-13 23:53 IST

ಸಾಂದರ್ಭಿಕ ಚಿತ್ರ | Photo : ANI 

ಇಸ್ಲಮಾಬಾದ್: ಶನಿವಾರ ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತಗಳಲ್ಲಿ ಗುಡುಗು, ಸಿಡಿಲಿನ ಸಹಿತ ಭಾರೀ ಮಳೆ ಸುರಿದಿದ್ದು ಸಿಡಿಲಿನ ಹೊಡೆತಕ್ಕೆ ಕನಿಷ್ಟ 14 ಮಂದಿ ಮೃತಪಟ್ಟಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.

ಸುರಬ್, ಡೆರಾ ಬುಗ್ತಿ ಮತ್ತು ಪಿಷಿನ್ ಜಿಲ್ಲೆಗಳಲ್ಲಿ ಸಿಡಿಲಿನ ಹೊಡೆತಕ್ಕೆ ಮೂವರು ಮಕ್ಕಳು, ಓರ್ವ ಮಹಿಳೆ ಸಹಿತ 14 ಮಂದಿ ಮೃತಪಟ್ಟಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಕ್ವೆಟ್ಟಾ ನಗರದಲ್ಲಿ ಭಾರೀ ಮಳೆಯಾಗಿದ್ದು ವಷುಕ್, ಸುರಬ್, ಕಲಾತ್, ಬೊಲಾನ್ ನಗರಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News