×
Ad

ಭಾರತದ ವಿರುದ್ಧದ ಕಾರ್ಯಚರಣೆ ಎಂದು ಚೀನಾದ ಕವಾಯತಿನ ಫೋಟೊವನ್ನು ಶಹಬಾಝ್ ಷರೀಫ್‌ಗೆ ಉಡುಗೊರೆ ನೀಡಿದ ಪಾಕ್ ಸೇನಾ ಮುಖ್ಯಸ್ಥ!

Update: 2025-05-26 20:22 IST

PC :  X \ theprint.in

ಹೊಸದಿಲ್ಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಚೀನಾದ ಸೇನಾ ಕವಾಯತಿನ ಫೋಟೊವನ್ನು ಆಪರೇಷನ್ ಬನ್ಯಾನಮ್ ಮಾರ್ಸೂಸ್ ಅಡಿಯಲ್ಲಿ ಭಾರತದ ವಿರುದ್ಧ ನಡೆಸಿದ ಕಾರ್ಯಾಚರಣೆಯ ಫೋಟೊ ಎಂದು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಅವರಿಗೆ ಉಡುಗೊರೆಯಾಗಿ ನೀಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕೆಗೆ ಕಾರಣವಾಗಿದೆ.

ರಾಜಕೀಯ ನಾಯಕರು ಮತ್ತು ಸಶಸ್ತ್ರ ಪಡೆಗಳಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಶನಿವಾರ ʼವಿಜಯʼ ಭೋಜನಕೂಟವನ್ನು ಆಯೋಜಿಸಿದ್ದರು.

ಈ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಚೀನಾದ ಸೇನಾ ಕವಾಯತಿನ ಫೋಟೊವನ್ನು ಆಪರೇಷನ್ ಬನ್ಯಾನಮ್ ಮಾರ್ಸೂಸ್ ಅಡಿಯಲ್ಲಿ ಭಾರತದ ವಿರುದ್ಧ ನಡೆಸಿದ ಕಾರ್ಯಾಚರಣೆಯ ಫೋಟೊ ಎಂದು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಅವರಿಗೆ ಉಡುಗೊರೆಯಾಗಿ ನೀಡಿದರು. ಆದರೆ ಅದು ಪಾಕ್ ಸೈನ್ಯದ ಕಾರ್ಯಚರಣೆಯ ಚಿತ್ರವಾಗಿರಲಿಲ್ಲ. 2017ರ ಚೀನಾದ ಮಿಲಿಟರಿ ಕವಾಯತಿನ ಚಿತ್ರವಾಗಿದೆ. ಪಾಕ್ ಸೇನೆಯ ಗೆಲುವು ಮತ್ತು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಮಾಡಲಾಗಿದೆ ಎಂದು ಹೇಳಿಕೊಂಡು ಹಂಚಿಕೊಂಡ ಸಶ್ತ್ರಾಸ್ತ್ರ ದಾಳಿಯ ಈ ಚಿತ್ರವು ನಕಲಿ ಎಂಬುದು ಬಹಿರಂಗವಾಗಿದೆ.

ಈ ಭೋಜನ ಕೂಟದಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಝ್ ಷರೀಫ್, ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್, ಸೆನೆಟ್ ಅಧ್ಯಕ್ಷ ಯೂಸುಫ್ ರಝಾ ಗಿಲಾನಿ, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅಯಾಝಾ ಸಾದಿಕ್, ಮಂತ್ರಿಗಳು, ಪ್ರಾಂತೀಯ ಗವರ್ನರ್ಗಳು ಮತ್ತು ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ನವಾಝ್ ಷರೀಫ್ ಅವರು ಪಾಕ್ ಸೇನೆಯ ಕಾರ್ಯಚರಣೆಯದ್ದು ಎಂದು ಹೇಳಿಕೊಂಡು ಹಿಡಿದಿರುವ ಪೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಕೆಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಫೋಟೊ ನಕಲಿ ಎಂದು ಪಾಕ್ ಸೇನೆಯನ್ನು ತರಾಟೆಗೆ ತೆಗೆದುಕೊಂಡರು. ನಕಲಿ ಪೋಟೊವನ್ನು ಹಂಚಿಕೊಂಡಿದ್ದಕ್ಕೆ ಪಾಕ್ ಸೇನೆಯನ್ನು ಅಪಹಾಸ್ಯ ಮಾಡಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತೆ ತಾಹಾ ಸಿದ್ದಿಕಿ, ಪಾಕಿಸ್ತಾನ ಸೇನಾ ಮುಖ್ಯಸ್ಥರು ಭಾರತದ ಮೇಲೆ ಪಾಕ್ ಸೇನೆಯ ದಾಳಿಯನ್ನು ವಿವರಿಸಲು ಪ್ರಧಾನಿ ಶೆಹಬಾಝ್ ಷರೀಫ್‌ಗೆ ಚೀನಾದ ಶಸ್ತ್ರಾಸ್ತ್ರ ಕವಾಯತಿನ ಫೋಟೋವನ್ನು ನೀಡಿದ್ದಾರೆ. ಇದು ಕೇವಲ ನಕಲಿ ವಿಜಯದ ನಿರೂಪಣೆಯಲ್ಲ, ಅದರೊಂದಿಗೆ ನಕಲಿ ಫೋಟೋ ಕೂಡ ಇದೆ. ಎಂತಹ ವ್ಯಂಗ್ಯ ಎಂದು ಬರೆದಿದ್ದಾರೆ.

ʼಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಫೋಟೋವನ್ನು ಹಂಚಿಕೊಳ್ಳುತ್ತಿರುವುದನ್ನು ನಾನು ನೋಡಿದೆ. ಅದು ಚೀನಾದ ಶಸ್ತ್ರಾಸ್ತ್ರಗಳಾಗಿರಬಹುದು ಎಂದು ಹೇಳುವ ಇತರ ಖಾತೆಗಳ ಪೋಸ್ಟ್‌ಗಳನ್ನು ನಾನು ನೋಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ನಿಜಕ್ಕೂ ಕೆಲವು ವರ್ಷಗಳ ಹಿಂದಿನ ಚೀನಾ ಸೇನೆಯ ಫೋಟೊ ಎಂಬುದು ಬಯಲಾಗಿದೆ. ಪಾಕಿಸ್ತಾನವು ತನ್ನ ನೆಲದಲ್ಲಿ ವಿಜಯದ ನಕಲಿ ನಿರೂಪಣೆಯನ್ನು ರೂಪಿಸಿದೆ. ಆದ್ದರಿಂದ ಅದು ನಕಲಿ ಫೋಟೋವನ್ನು ಬಳಸುತ್ತಿರುವುದು ಆಶ್ಚರ್ಯವೇನಿಲ್ಲ ಎಂದು ಸಿದ್ದಿಕಿ ಅವರು ಚೀನಾ ಸೇನೆಯ ಫೋಟೊ ಹೇಗೆ ಪತ್ತೆ ಹಚ್ಚಿದರು ಎಂದು ದಿ ಪ್ರಿಂಟ್‌ಗೆ ವಿವರಿಸಿದರು.

ಇದಲ್ಲದೆ, ಇನ್ನೊಂದು ಆಯಮವಿದೆ, ಅದು ಹೆಚ್ಚು ಊಹಾತ್ಮಕವಾಗಿದೆ. ಭಾರತದೊಂದಿಗೆ ಸಂಘರ್ಷವನ್ನು ಹೊಂದಿರುವ ಚೀನಾ ಸರಕಾರವನ್ನು ಮೆಚ್ಚಿಸಲು ಅವರು ಚೀನಾದ ಚಿತ್ರಣವನ್ನು ಬಳಸಿರಬಹುದು. ಚೀನಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಪ್ರಮುಖ ಪೂರೈಕೆದಾರ ದೇಶವಾಗಿದೆ. ಇದು ಧನ್ಯವಾದ ಹೇಳಲು ಒಂದು ಮಾರ್ಗವಾಗಿರಬಹುದು ಪತ್ರಕರ್ತೆ ತಹಾ ಸಿದ್ದಿಕಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News