×
Ad

ಪಾಕ್ ರಾಷ್ಟ್ರೀಯ ಅಸೆಂಬ್ಲಿ | ಸ್ಪೀಕರ್ ಆಗಿ ಆಯಾಝ್ ಸಾದಿಕ್ ಆಯ್ಕೆ

Update: 2024-03-01 23:04 IST

Photo : NDTV  

ಇಸ್ಲಾಮಾಬಾದ್: ನೂತನವಾಗಿ ರಚನೆಯಾದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಆಗಿ ಪಿಎಂಎಲ್-ಎನ್ ಪಕ್ಷದ ಹಿರಿಯ ನಾಯಕ ಸರ್ದಾರ್ ಆಯಾಝ್ ಸಾದಿಕ್ ಆಯ್ಕೆಯಾಗಿದ್ದಾರೆ.

ಸ್ಪೀಕರ್ ಹುದ್ದೆಗೆ ನಡೆದ ಚುನಾವಣೆಗೆ ಒಟ್ಟು 291 ಮತಗಳು ಚಲಾವಣೆಯಾಗಿದ್ದು ಸಾದಿಕ್ ಅವರಿಗೆ 199 ಮತಗಳು ದೊರೆತಿದ್ದವು. ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕೆ ಪಾಕಿಸ್ತಾನ್ ಪಕ್ಷದ ಅಭ್ಯರ್ಥಿ ಅಮಿರ್ ಡೋಗರ್ ಅವರಿಗೆ 91 ಮತಗಳು ಬಿದ್ದವು. ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್ಐಸಿ)ನ ಸದಸ್ಯರ ಗದ್ದಲದ ನಡುವೆಯೇ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಿತು.

ಮತ ಏಣಿಕೆ ಪೂರ್ಣಗೊಂಡ ಬಳಿಕ ನಿರ್ಗಮನ ಸ್ಪೀಕರ್ ರಾಜಾ ಪರ್ವೇಝ್ ಅಶ್ರಫ್ ಅರು ಸದನದಲ್ಲಿ ಮಾತನಾಡಿ, ಒಟ್ಟು 291 ಮತಗಳು ಚಲಾವಣೆಯಾಗಿದ್ದು, ಒಂದು ಮತವು ‘ಅಸಿಂಧು’ಗೊಂಡಿದೆ. ಎಂದು ಹೇಳಿದರು.

ಮಾಜಿ ಪ್ರಧಾನಿ ನವಾಝ್ ಶರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷವು ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಸೇರಿದಂತೆ ತನ್ನ ಮೈತ್ರಿಕೂಟದ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಚುನಾವಣೆಯಲ್ಲಿ ಪಿಎಂಎಲ್-ಎನ್ ಪಕ್ಷದ ಗೆಲುವು ಖಚಿತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News