×
Ad

ಅಫ್ಘಾನ್ ನಲ್ಲಿ ಪಾಕ್ ವಾಯು ದಾಳಿಯಿಂದ 8 ಸಾವು: ತಾಲಿಬಾನ್ ಆರೋಪ

Update: 2024-03-18 22:23 IST

Photo: X/@AsmaraK41093312

ಕಾಬೂಲ್ : ನಮ್ಮ ಭೂಭಾಗದ ಮೇಲೆ ಪಾಕಿಸ್ತಾನವು ಎರಡು ವಾಯು ದಾಳಿಗಳನ್ನು ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸೋಮವಾರ ಹೇಳಿದೆ. ದಾಳಿಯಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅದು ಆರೋಪಿಸಿದೆ.

ಅದೇ ವೇಳೆ, ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಗಡಿಯುದ್ದಕ್ಕೂ ಪಾಕಿಸ್ತಾನಿ ಪಡೆಗಳ ಮೇಲೆ ಗಡಿಯುದ್ದಕ್ಕೂ ಭಾರೀ ಗುಂಡಿನ ದಾಳಿ ನಡೆಸಿರುವುದಾಗಿ ಅದು ಹೇಳಿದೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿರುವ ಹಲವು ಭಯೋತ್ಪಾದಕ ದಾಳಿಗಳಿಗೆ ಯಾರು ಕಾರಣ ಎಂಬ ಬಗ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಆರೋಪಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ. ದಾಳಿಗಳನ್ನು ಅಫ್ಘಾನಿಸ್ತಾನದ ನೆಲದಿಂದ ಮಾಡಲಾಗಿದೆ ಎಂದು ಪಾಕಿಸ್ತಾನ ಆರೋಪಿಸಿದರೆ, ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಇದನ್ನು ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News