×
Ad

ಪಾಕಿಸ್ತಾನದಲ್ಲಿ ಸ್ಫೋಟಕ್ಕೆ ಕನಿಷ್ಠ ಇಬ್ಬರು ಸಾವು; ವರದಿ

Update: 2024-03-10 23:28 IST

ಇಸ್ಲಮಾಬಾದ್: ದೇಶದ ವಾಯವ್ಯ ಪ್ರದೇಶದಲ್ಲಿರುವ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ರವಿವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮೋಟಾರು ಬೈಕ್‍ನಲ್ಲಿ ಮೂರು ಮಂದಿ ಸುಮಾರು 5 ಕಿಲೋ ಗಳಷ್ಟು ಸ್ಫೋಟಕಗಳನ್ನು ಸಾಗಿಸುತ್ತಿದ್ದಾಗ ಪೇಷಾವರದ ಬೋರ್ಡ್ ಬಝಾರ್ ಪ್ರದೇಶದಲ್ಲಿ ಸ್ಫೋಟಕಗಳು ಸಿಡಿದಿದ್ದು ಬೈಕ್ ಸ್ಫೋಟಗೊಂಡಿದೆ. ಬೈಕ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಕಾಶಿಫ್ ಅಫ್ತಾಬ್ ಅಬ್ಬಾಸಿ ಹೇಳಿದ್ದಾರೆ.

ಆರಂಭದಲ್ಲಿ ಇದು ಆತ್ಮಾಹುತಿ ಬಾಂಬ್ ದಾಳಿಯೆಂದು ಪೊಲೀಸರು ಹೇಳಿದ್ದರು. ಆದರೆ ಬಾಂಬ್ ನಿಷ್ಕ್ರಿಯದಳದವರು ಇದು ಆತ್ಮಾಹುತಿ ದಾಳಿಯಲ್ಲ ಎಂದು ದೃಢಪಡಿಸಿದ್ದಾರೆ. ಸ್ಪೋಟದ ಬಗ್ಗೆ ವರದಿ ನೀಡುವಂತೆ ಪ್ರಾಂತೀಯ ಸರಕಾರ ಅಧಿಕಾರಿಗಳಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News