ಅಫ್ಘಾನ್ ಗಡಿಯಲ್ಲಿ ಮತ್ತೆ ಘರ್ಷಣೆ: ಪಾಕಿಸ್ತಾನದ 5 ಯೋಧರ ಮೃತ್ಯು
Update: 2025-10-27 20:50 IST
ಸಾಂದರ್ಭಿಕ ಚಿತ್ರ | Photo Credit : NDTV
ಪೇಷಾವರ, ಅ.27: ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ಖೈಬರ್ ಪಖ್ತೂಂಕ್ವಾದಲ್ಲಿ ಘರ್ಷಣೆ ಪುನರಾರಂಭವಾಗಿದ್ದು ಪಾಕಿಸ್ತಾನದ ಕನಿಷ್ಠ ಐದು ಯೋಧರು ಹಾಗೂ 25 ಉಗ್ರರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಕುರ್ನಾಮ್ ಮತ್ತು ಉತ್ತರ ವಝೀರಿಸ್ತಾನ ಜಿಲ್ಲೆಗಳಲ್ಲಿ ಉಗ್ರಗಾಮಿಗಳು ಅಫ್ಘಾನಿಸ್ತಾನದ ಗಡಿದಾಟಿ ಪಾಕಿಸ್ತಾನದ ಒಳಗೆ ನುಸುಳಲು ಪ್ರಯತ್ನಿಸಿದಾಗ ಘರ್ಷಣೆ ಪ್ರಾರಂಭಗೊಂಡಿದೆ. ಪಾಕಿಸ್ತಾನ ಸೇನೆಯ ಪ್ರತಿದಾಳಿಯಲ್ಲಿ ಉಗ್ರರ ಗುಂಪಿನ ಕನಿಷ್ಠ 25 ಸದಸ್ಯರು ಸಾವನ್ನಪ್ಪಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.