×
Ad

ಪಾಕ್: 22 ಭಾರತೀಯ ಮೀನುಗಾರರ ಬಿಡುಗಡೆ

Update: 2025-02-25 22:20 IST

Photo Credit: PTI 

ಅಹ್ಮದಾಬಾದ್: ಪಾಕಿಸ್ತಾನದ ಕರಾಚಿ ಜೈಲಿನಿಂದ 22 ಮಂದಿ ಭಾರತೀಯ ಮೀನುಗಾರರು ಮಂಗಳವಾರ ಗುಜರಾತ್‌ನ ಗಿರಿಸೋಮನಾಥ್‌ಗೆ ತಲುಪಿದ್ದಾರೆ. ಕೊನೆಗೂ ಸ್ವದೇಶಕ್ಕೆ ಮರಳಲು ಸಾಧ್ಯವಾಗಿದ್ದಕ್ಕಾಗಿ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಜೈಲುಗಳಲ್ಲಿರುವ ಇನ್ನೂ ಹಲವಾರು ಭಾರತೀಯ ಮೀನುಗಾರರ ತ್ವರಿತವಾಗಿ ಬಿಡುಗಡೆಗೊಳಿಸಲು ಶ್ರಮಿಸುವಂತೆಯೂ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

22 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ನೌಕಾಯಾನ ಭದ್ರತಾ ಏಜೆನ್ಸಿಯು 2021ರ ಎಪ್ರಿಲ್ ಆಹಗೂ 2022ರ ಡಿಸೆಂಬರ್ ನಡುವೆ ಬಂಧಿಸಿದೆ. ಗುಜರಾತ್ ಸಮೀಪದ ಅರಬ್ಬಿ ಸಮುದ್ರದ ಗಡಿಪ್ರದೇಶದಲ್ಲಿ ಮಿನುಗಾರಿಕೆಯಲ್ಲಿ ತೊಡಗಿದ್ದಾಗ ಅವರನ್ನ ಪಾಕಿಸ್ತಾನದ ನೌಕಾಪಡೆ ಬಧಿಸಿತ್ತು. ಪಾಕಿಸ್ತಾನದ ಜೈಲುಗಳಲ್ಲಿ ಇನ್ನೂ 195 ಭಾರತೀಯ ಮೀನುಗಾರರಿದ್ದಾರೆಂದು ಮೀನುಗಾರಿಕೆಯ ಸಹಾಯಕ ನಿರ್ದೇಶಕ ವೆರಾವಲ್, ವಿ.ಕೆ.ಗೋಯಲ್ ತಿಳಿಸಿದ್ದಾರೆ.

ಬಿಡುಗಡೆಗೊಂಡ 22 ಮೀನುಗಾರರ ಪೈಕಿ 18 ಮಂದಿ ಗುಜರಾತ್‌ನವರಾಗಿದ್ದು, ಮೂವರು ಕೇಂದ್ರಾಡಳಿತ ಪ್ರದೇಶ ದಿಯನವರು. ಇನ್ನೋರ್ವ ಉತ್ತರಪ್ರದೇಶದವನೆಂದು ತಿಳಿದುಬಂದಿದೆ.

ಈ ಮೀನುಗಾರರ ಬಿಡುಗಡೆಗೆ ಶ್ರಮಿಸುವಂತೆ ಕೋರಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಕೃಷಿ ಸಚಿವ ರಾಘವ್‌ಜೀ ಪಟೇಲ್ ಅವರು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೆಂದು ಗುಜರಾತ್ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News