×
Ad

ಫೆಲೆಸ್ತೀನ್‌ನ ವಿವಿಧೆಡೆ ಇಸ್ರೇಲ್‌ ನ ವಾಯುದಾಳಿಗೆ ಕನಿಷ್ಠ 60 ಬಲಿ

Update: 2025-05-20 21:34 IST

PC : X \ @theworldtruthe

ಗಾಝಾಸಿಟಿ: ಯುದ್ಧದಿಂದ ಜರ್ಜರಿತವಾದ ಫೆಲೆಸ್ತೀನ್ ಪ್ರಾಂತದ ವಿವಿಧೆಡೆ ಇಸ್ರೇಲ್ ಸೇನೆ ಮಂಗಳವಾರ ನಡೆಸಿದ ವಾಯು ದಾಳಿಗಳಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ಆಕ್ರಮಣದ ವಿರುದ್ಧ ಅಂತಾರಾಷ್ಟ್ರೀಯ ಖಂಡನೆ ತೀವ್ರಗೊಳ್ಳುತ್ತಿರುವ ಹೊರತಾಗಿಯೂ ಇಸ್ರೇಲ್ ಮಂಗಳವಾರ ಮನೆ ಹಾಗೂ ಸಂತ್ರಸ್ತರ ಆಶ್ರಯ ಕೇಂದ್ರವಾಗಿ ಪರಿವರ್ತಿಸಲಾಗಿದ್ದ ಶಾಲಾ ಕಟ್ಟಡದ ಮೇಲೆ ದಾಳಿ ನಡೆಸಿದೆಯೆಂದು ಮೂಲಗಳು ತಿಳಿಸಿವೆ.

ಇಸ್ರೇಲ್ ಸೇನೆಯು ಶನಿವಾರದಿಂದ ಗಾಝಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಅನ್ನು ಸೊಲಿಸುವುದೇ ತನ್ನ ಗುರಿಯಾಗಿದೆ ಎಂದು ಹೇಳಿದೆ.

ಮಂಗಳವಾರ ಇಸ್ರೇಲ್‌ನ ದಾಳಿಯಲ್ಲಿ ಮೃತಪಟ್ಟ ಕನಿಷ್ಠ 60 ಮಂದಿಯ ಮೃತದೇಹಗಳನ್ನು ಆಸ್ಪತ್ರೆಯಲ್ಲಿರಿಸಲಾಗಿದೆ. ಅವರ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು. ಅಲ್ಲದೆ ಡಜನುಗಟ್ಟಲೆ ಜನರು ಗಾಯಗೊಂಡಿದ್ದಾರೆ’’ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮುಹಮ್ಮದ್ ಬಸ್ಸಾಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News