×
Ad

ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡಲು ಬೆಲ್ಜಿಯಂ ನಿರ್ಧಾರ

Update: 2025-09-02 21:45 IST

ಮ್ಯಾಕ್ಸಿಮ್ ಪ್ರೆವೋಟ್ | PC :  X \ @prevotmaxime

ಬ್ರಸೆಲ್ಸ್, ಸೆ.2: ಸೆಪ್ಟಂಬರ್‍ ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಲ್ಜಿಯಂ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸಲಿದೆ ಎಂದು ವಿದೇಶಾಂಗ ಇಲಾಖೆ ಮಂಗಳವಾರ ಘೋಷಿಸಿದೆ.

`ವಿಶ್ವಸಂಸ್ಥೆ ಅಧಿವೇಶನದಲ್ಲಿ ಪೆಲೆಸ್ತೀನ್ ರಾಷ್ಟ್ರವನ್ನು ಬೆಲ್ಜಿಯಂ ಗುರುತಿಸಲಿದೆ ಮತ್ತು ಇಸ್ರೇಲ್ ಸರಕಾರದ ವಿರುದ್ಧ ದೃಢವಾದ ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಎಂದು ಬೆಲ್ಜಿಯಂ ವಿದೇಶಾಂಗ ಸಚಿವ ಮ್ಯಾಕ್ಸಿಮ್ ಪ್ರೆವೋಟ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

`ಗಾಝಾದಲ್ಲಿ ಹೆಚ್ಚುತ್ತಿರುವ ಮಾನವೀಯ ದುರಂತವನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿ ಇಸ್ರೇಲ್‍ ನ ಕಾರ್ಯಾಚರಣೆಯಿಂದಾಗಿ ಬಹುತೇಕ ಜನಸಂಖ್ಯೆ ಸ್ಥಳಾಂತರಗೊಂಡಿದ್ದು ವಿಶ್ವಸಂಸ್ಥೆಯು ಬರಗಾಲ ಪ್ರದೇಶವೆಂದು ಘೋಷಿಸಿದೆ. ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಇಸ್ರೇಲ್ ಸರಕಾರ ಮತ್ತು ಹಮಾಸ್ ಗುಂಪಿನ ವಿರುದ್ಧ ಒತ್ತಡ ಹೆಚ್ಚಿಸಲು ಬೆಲ್ಜಿಯಂ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News