×
Ad

ಫೆಲೆಸ್ತೀನ್‌ ರಾಷ್ಟ್ರ ಗುರುತಿಸಿದ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ

Update: 2025-09-21 22:07 IST

ಸಾಂದರ್ಭಿಕ ಚಿತ್ರ (PTI)

ಲಂಡನ್, ಸೆ.21: ಸುಮಾರು ಎರಡು ವರ್ಷದ ಗಾಝಾ ಯುದ್ಧದಲ್ಲಿ ಕದನ ವಿರಾಮ ಸೇರಿದಂತೆ ಷರತ್ತುಗಳನ್ನು ಪೂರೈಸಲು ಇಸ್ರೇಲ್ ವಿಫಲವಾದ ನಂತರ ತಾನು ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವುದಾಗಿ ಬ್ರಿಟನ್ ರವಿವಾರ ಹೇಳಿದೆ.

`ಇಂದು ಫೆಲೆಸ್ತಿನೀಯರು ಮತ್ತು ಇಸ್ರೇಲ್‌ಗರಿಗೆ ಶಾಂತಿಯ ಭರವಸೆಯನ್ನು ಮತ್ತು ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಪುನರುಜ್ಜೀವನಗೊಳಿಸಲು ಬ್ರಿಟನ್ ಅಧಿಕೃತವಾಗಿ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುತ್ತದೆ' ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

140ಕ್ಕೂ ಇತರ ರಾಷ್ಟ್ರಗಳು ಕೈಗೊಂಡಿರುವ ನಿರ್ಧಾರವನ್ನು ಲಂಡನ್ ಅನುಸರಿಸಿದ್ದು ಇದು ಇಸ್ರೇಲ್ ಹಾಗೂ ಅದರ ಪ್ರಮುಖ ಮಿತ್ರ ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಲಿದೆ. ಎರಡನೇ ವಿಶ್ವಯುದ್ಧದ ಬಳಿಕ ಇಸ್ರೇಲನ್ನು ಆಧುನಿಕ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ದೀರ್ಘಾವಧಿಯಿಂದ ಅದರ ಮಿತ್ರನಾಗಿ ಗುರುತಿಸಿಕೊಂಡಿರುವ ಬ್ರಿಟನ್‌ನ ನಿರ್ಧಾರವು ಸಾಂಕೇತಿಕ ಮಹತ್ವವನ್ನು ಹೊಂದಿದೆ. ಈ ಮಧ್ಯೆ, ಕೆನಡಾ ಮತ್ತು ಆಸ್ಟ್ರೇಲಿಯಾಗಳೂ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸಿದ್ದು ಪೋರ್ಚುಗಲ್ ಕೂಡಾ ಈ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News