×
Ad

ಇಸ್ರೇಲ್ ನಿಂದ ಫೆಲೆಸ್ತೀನಿನ ಸಂಸದೆ ಜರಾರ್ ಬಂಧನ

Update: 2023-12-26 23:35 IST

ಖಲೀದಾ ಜರಾರ್ | Photo: aljazeera.com

ಟೆಲ್ಅವೀವ್: ಫೆಲೆಸ್ತೀನಿನ ಹಿರಿಯ ರಾಜಕಾರಣಿ, ಸಂಸದೆ ಖಲೀದಾ ಜರಾರ್ ರನ್ನು ಆಕ್ರಮಿತ ಪಶ್ಚಿಮದಂಡೆಯಲ್ಲಿ ಬಂಧಿಸಿರುವುದಾಗಿ ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.

ಫೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್ ನ ಬಣವಾಗಿರುವ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್(PFLP)ನ ಪ್ರಮುಖ ನಾಯಕಿಯಾಗಿರುವ ಜರಾರ್ರನ್ನು ` ವಾಂಟೆಡ್ ಭಯೋತ್ಪಾದಕರ' ಪಟ್ಟಿಯಲ್ಲಿ ಸೇರಿಸಿದೆ. ಪಿಎಫ್ಎಲ್ಪಿಯನ್ನು ಇಸ್ರೇಲ್, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಭಯೋತ್ಪಾದಕ ಸಂಘಟನೆಯೆಂದು ಹೆಸರಿಸಿದೆ.

ಮಂಗಳವಾರ ಬೆಳಿಗ್ಗೆ 5 ಗಂಟೆಗೆ ರಮಲ್ಲಾದಲ್ಲಿರುವ ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಇಸ್ರೇಲ್ ಪಡೆ ಜರಾರ್ರನ್ನು ಬಂಧಿಸಿದೆ' ಎಂದು ಅವರ ಪತಿ ಮಾಹಿತಿ ನೀಡಿದ್ದಾರೆ. ಜರಾರ್ರನ್ನು 2019ರ ಅಕ್ಟೋಬರ್ನಲ್ಲಿಯೂ ಇಸ್ರೇಲ್ ಪಡೆ ಬಂಧಿಸಿದ್ದು ವಿಚಾರಣೆ ನಡೆಸದೆ ಒಂದು ವರ್ಷದ ಜೈಲುವಾಸದ ಬಳಿಕ 2020ರ ಸೆಪ್ಟಂಬರ್ ನಲ್ಲಿ ಬಿಡುಗಡೆಗೊಳಿಸಿತ್ತು. 2006ರಿಂದಲೂ ಫೆಲೆಸ್ತೀನಿಯನ್ ಸಂಸತ್ತಿನ ಸದಸ್ಯೆಯಾಗಿರುವ ಝರಾರ್ ಮಹಿಳಾ ಹಕ್ಕುಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಸ್ರೇಲ್ ಪಡೆ ತನ್ನ ಪ್ರಮುಖ ಮುಖಂಡರನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿಸಿದೆ. ಆದರೆ ಈ ಕ್ರಮವು ನಮ್ಮ ಜನರ ಇಚ್ಛಾಶಕ್ತಿಯನ್ನು ಮುರಿಯಲು ಸಾಧ್ಯವಾಗದು' ಎಂದು ಪಿಎಫ್ಎಲ್ಪಿ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News