×
Ad

ಗಾಝಾ ಆಕ್ರಮಣ: ಫೆಲೆಸ್ತೀನ್ ಪ್ರಧಾನಿ ರಾಜೀನಾಮೆ

Update: 2024-02-26 15:07 IST

ಮುಹಮ್ಮದ್ ಶ್ತಾಯಿಹ್ (Photo: X/@DrShtayyeh)

ಗಾಝಾ: ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ಅವರು ಸೋಮವಾರ ಆಕ್ರಮಿತ ಪಶ್ಚಿಮ ದಂಡೆಯ ಭಾಗಗಳನ್ನು ಆಳುತ್ತಿರುವ ತನ್ನ ಸರಕಾರದ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ಆಕ್ರಮಣ ಹಾಗೂ ಪಶ್ಚಿಮ ದಂಡೆ ಮತ್ತು ಜೆರುಸಲೇಮ್‌ನಲ್ಲಿ ಪರಿಸ್ಥಿತಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರಿಗೆ ಸರಕಾರದ ರಾಜೀನಾಮೆಯನ್ನು ಸಲ್ಲಿಸುವುದಾಗಿ ಮುಹಮ್ಮದ್ ಶ್ತಾಯಿಹ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News