ಫೆಲೆಸ್ತೀನಿಯನ್ ಪರ ಪ್ರತಿಭಟನೆಯ ನಾಯಕ ಖಲೀಲ್ ಗಡೀಪಾರಿಗೆ ಅಮೆರಿಕ ನ್ಯಾಯಾಲಯ ಆದೇಶ
ಮಹ್ಮೂದ್ ಖಲೀಲ್ | PC : X
ವಾಷಿಂಗ್ಟನ್: ಪ್ರಮುಖ ಫೆಲೆಸ್ತೀನ್ ಪರ ಪ್ರತಿಭಟನಾ ನಾಯಕ ಮಹ್ಮೂದ್ ಖಲೀಲ್ ಅವರನ್ನು ಅಲ್ಜೀರಿಯಾ ಅಥವಾ ಸಿರಿಯಾಕ್ಕೆ ಗಡೀಪಾರು ಮಾಡುವಂತೆ ದಕ್ಷಿಣ ಅಮೆರಿಕಾ ರಾಜ್ಯ ಲೂಯಿಸಿಯಾನಾದ ನ್ಯಾಯಾಧೀಶರು ಆದೇಶಿಸಿದ್ದಾರೆ.
ಹಸಿರು ಕಾರ್ಡ್ ಅರ್ಜಿಯಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಲು ಖಲೀಲ್ ವಿಫಲವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಗ್ರೀನ್‍ಕಾರ್ಡ್ ಅರ್ಜಿಯಲ್ಲಿ ಖಲೀಲ್ ಉದ್ದೇಶಪೂರ್ವಕವಾಗಿ ಕೆಲವೊಂದು ಮಾಹಿತಿಗಳನ್ನು ಮರೆ ಮಾಚಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಅಮೆರಿಕದ ಕಾನೂನುಬದ್ಧ ಕಾಯಂ ನಿವಾಸಿಯಾಗಿರುವ ಖಲೀಲ್, ಕೊಲಂಬಿಯಾ ವಿವಿಯ ಮಾಜಿ ವಿದ್ಯಾರ್ಥಿಯಾಗಿದ್ದು ಕ್ಯಾಂಪಸ್‍ನಲ್ಲಿ ನಡೆದಿದ್ದ ಫೆಲೆಸ್ತೀನಿಯನ್ ಪರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ` ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ನನ್ನ ವಿರುದ್ಧ ಪ್ರತೀಕಾರ ತೀರಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ' ಎಂದು ಖಲೀಲ್ ಪ್ರತಿಕ್ರಿಯಿಸಿದ್ದಾರೆ.