×
Ad

ಗಾಝಾ ಭವಿಷ್ಯಕ್ಕೆ ಫೆಲಸ್ತೀನ್ ಧ್ವನಿ ಪ್ರಮುಖ: ಆಂಟನಿ ಬ್ಲಿಂಕೆನ್

Update: 2023-11-06 10:26 IST

Photo: twitter.com/SecBlinken

ಬಾಗ್ದಾದ್: ಗಾಝಾಪಟ್ಟಿಯ ಭವಿಷ್ಯದಲ್ಲಿ ಫೆಲಸ್ತೀನ್ ಪ್ರಾಧಿಕಾರ ಕೇಂದ್ರ ಪಾತ್ರವನ್ನು ವಹಿಸುವ ಅನಿವಾರ್ಯತೆ ಇದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಆಂಟೋನಿ ಬ್ಲಿಂಕೆನ್ ಅಭಿಪ್ರಾಯಪಟ್ಟಿದ್ದಾರೆ. ಹಮಾಸ್- ಇಸ್ರೇಲ್ ಕದನದ ಉದ್ವಿಗ್ನತೆ ನಡುವೆಯೇ ಇರಾಕ್ ಮುಖಂಡರ ಜತೆ ಮಾತುಕತೆ ನಡೆಸಿ ಈ ಪ್ರದೇಶದಲ್ಲಿ ಪ್ರವಾಸ ಕೈಗೊಂಡ ಅವರು, ಈ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ದಂಡೆ ನಗರವಾದ ರಮಲ್ಹಾದಲ್ಲಿ ಫೆಲಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹ್ಮದ್ ಅಬ್ಬಾಸ್ ಅವರನ್ನು ಭೇಟಿ ಮಾಡಲು ಇಸ್ರೇಲಿ ತಪಾಸಣಾ ಕೇಂದ್ರದ ಮೂಲಕ ಬ್ಲಿಂಕೆನ್ ಹಾದು ಹೋದರು. ಅಕ್ಟೋಬರ್ 7ರ ಇಸ್ರೇಲ್ ಮೇಲಿನ ದಾಳಿಯ ಬಳಿಕ ಬ್ಲಿಂಕೆನ್ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ.

ಫೆಲಸ್ತೀನಿಯನ್ನರ ಅಭಿಪ್ರಾಯಗಳು, ಧ್ವನಿಗಳು ಮತ್ತು ಆಶೋತ್ತರಗಳು ಗಾಝಾದ ಭವಿಷ್ಯದ ಬಗೆಗಿನ ಮಾತುಕತೆಯಲ್ಲಿ ಪ್ರಧಾನ ಅಂಶಗಳಾಗುತ್ತವೆ ಎಂದು ಬಾಗ್ದಾದ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಗಾಝಾ ಮೇಲಿನ ವಾಯುದಾಳಿಯನ್ನು ಇಸ್ರೇಲ್ ಮುಂದುವರಿಸಿದ್ದು, ಗಾಝಾ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಾಗಲೇ 9770 ಮಂದಿಯನ್ನು ಇಸ್ರೇಲಿ ಪಡೆಗಳು ಹತ್ಯೆ ಮಾಡಿವೆ. ಇಸ್ರೇಲ್ ತಕ್ಷಣ ಕದನ ವಿರಾಮ ಘೋಷಿಸಬೇಕು ಎಂಬ ಅಮೆರಿಕದ ನಿಲುವನ್ನು ಬ್ಲಿಂಕೇನ್ ಪುನರುಚ್ಚರಿಸಿದ್ದಾರೆ. ಮಾನವೀಯ ನೆರವಿಗಾಗಿ ಮನವಿ ಮಾಡುವುದು ಒಂದು ಪ್ರಕ್ರಿಯೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ವಿವರಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News