×
Ad

ಹಸಿವಿನಿಂದ ಕಂಗಾಲಾದ ಫೆಲೆಸ್ತೀನಿಯರ ಮೇಲೆ ನೆರವು ಕೇಂದ್ರಗಳಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಅಮೆರಿಕದ ಭದ್ರತಾ ಸಿಬ್ಬಂದಿ!

Update: 2025-07-03 23:02 IST

PC | X ; @GreatAFG2

ಬಿರ್‌ಶೆಬಾ: ಸಂಘರ್ಷ ಪೀಡಿತ ಗಾಝಾದಲ್ಲಿ ಹಸಿವಿನಿಂದ ತತ್ತರಿಸಿರುವ ಫೆಲೆಸ್ತೀನಿಯರು ನೆರವು ವಿತರಣಾ ಕೇಂದ್ರಗಳಲ್ಲಿ ಆಹಾರಕ್ಕಾಗಿ ಪರದಾಡುತ್ತಿರುವಾಗ, ಅವರ ಮೇಲೆ ಕಾವಲಿಗೆ ನಿಯೋಜಿತರಾದ ಅಮೆರಿಕದ ಭದ್ರತಾ ಗುತ್ತಿಗೆದಾರರು ಸ್ಟನ್‌ ಗನ್‌ ಗಳಿಂದ ದಾಳಿ ನಡೆಸುತ್ತಿರುವುದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ ಗೆ ಲಭ್ಯವಾಗಿರುವ ವೀಡಿಯೋ ಹಾಗೂ ಮಾಹಿತಿಗಳಿಂದ ಬೆಳಕಿಗೆ ಬಂದಿದೆ.

ಈ ವಿಷಯವನ್ನು ಇಬ್ಬರು ಅಮೆರಿಕನ್ ಭದ್ರತಾ ಗುತ್ತಿಗೆ ಸಿಬ್ಬಂದಿಯೇ ಬಹಿರಂಗಪಡಿಸಿದ್ದಾರೆ. ತಮ್ಮ ಮಾಲಕರ ಇಂತಹ ಅಪಾಯಕಾರಿ ಹಾಗೂ ಬೇಜವಾಬ್ದಾರಿಯುತ ವರ್ತನೆಯಿಂದ ಬೇಸತ್ತು, ಈ ವಿಷಯವನ್ನು ಬಯಲು ಮಾಡಿರುವುದಾಗಿ ಅವರು ಹೇಳಿದ್ದಾರೆ.

ಗಾಝಾದಲ್ಲಿ ಅಮೆರಿಕದ ನೆರವು ಕೇಂದ್ರಗಳಲ್ಲಿ ನಿಯೋಜಿತರಾದ ಗುತ್ತಿಗೆಯ ಭದ್ರತಾ ಸಿಬ್ಬಂದಿಯಲ್ಲಿ ಹೆಚ್ಚಿನವರು ಸೂಕ್ತ ಅರ್ಹತೆಯನ್ನು ಹೊಂದಿರುವುದಿಲ್ಲ ಮತ್ತು ಪರಿಶೀಲನೆಗೆ ಒಳಪಟ್ಟಿರುವುದಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾದ ಅವರು ಮನಬಂದಂತೆ ವರ್ತಿಸಲು ಮುಕ್ತ ಪರವಾನಗಿ ಹೊಂದಿದ್ದಾರೆಂದು ಹೇಳಿದ್ದಾರೆ.

ಆಹಾರಕ್ಕಾಗಿ ಜಮಾಯಿಸುವ ಫೆಲೆಸ್ತೀನಿಯರನ್ನು ಚದುರಿಸಲು ತಮ್ಮ ಸಹದ್ಯೋಗಿಗಳು ಅವರ ಮೇಲೆ ಸ್ಟನ್‌ ಗ್ರೆನೇಡ್‌ ಗಳು ಹಾಗೂ ಪೆಪ್ಪೆರ್‌ ಸ್ಪ್ರೇಯನ್ನು ಎಸೆಯುತ್ತಿದ್ದಾರೆಂದು ಅವರು ಹೇಳಿದ್ದಾರೆ. ಇದರಿಂದ ಅನ್ಯಾಯವಾಗಿ ಅಮಾಯಕರು ಬಲಿಯಾಗುತ್ತಿದ್ದಾರೆಂದು ಅವರು ತಿಳಿಸಿದ್ದಾರೆ. ಆಹಾರ ಹಾಗೂ ಸಾಮಾಗ್ರಿಗಳನ್ನು ಪಡೆಯಲು ನೆರವು ವಿತರಣಾ ಕೇಂದ್ರಕ್ಕೆ ಬರುವವರ ಮೇಲೆ ಕಣ್ಗಾವಲು ನಡೆಸುವ ಅಮೆರಿಕನ್ ಸಿಬ್ಬಂದಿಗೆ ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ, ಆ ಬಗ್ಗೆ ಮಾಹಿತಿಯನ್ನು ಅವರು ಇಸ್ರೇಲಿ ಸೇನೆಯ ಜೊತೆ ಹಂಚಿಕೊಳ್ಳುತ್ತಾರೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News