×
Ad

ಕೆನಡಾ | ದೇವಸ್ಥಾನಗಳ ಮೇಲಿನ ದಾಳಿಗೆ ಹೊಸ ದಿನಾಂಕ ಘೋಷಿಸಿದ ಪನ್ನೂನ್

Update: 2024-11-11 22:32 IST

ಗುರುಪತ್ವಂತ್ ಸಿಂಗ್ ಪನ್ನೂನ್  | PC : PTI 

ಒಟ್ಟಾವ : ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಕೆನಡಾದಲ್ಲಿ ದೇವಸ್ಥಾನಗಳ ಮೇಲಿನ ದಾಳಿಗೆ ಹೊಸ ದಿನಾಂಕವನ್ನು ಘೋಷಿಸಿದ್ದು ಕೆನಡಾದ ಹಿಂದು ಸಂಸದ ಚಂದನ್ ಆರ್ಯಗೆ ಬಹಿರಂಗ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ.

ಕೆನಡಾದಲ್ಲಿನ ಹಿಂದು ದೇವಸ್ಥಾನಗಳ ಮೇಲೆ ನವೆಂಬರ್ 16 ಮತ್ತು 17ರಂದು ದಾಳಿ ನಡೆಯಲಿದೆ. ನಾವು ಅಯೋಧ್ಯೆಯ ಅಡಿಪಾಯವನ್ನು ಅಲ್ಲಾಡಿಸುತ್ತೇವೆ. ಭಾರತೀಯ ಭಯೋತ್ಪಾದಕ ರಾಜತಾಂತ್ರಿಕರಿಗೆ ಮುಂದಿನ ಸವಾಲು: ನವೆಂಬರ್ 16ರಂದು ಮಿಸಿಸೌಗಾದ ಕಾಲಿಬರಿ ಮಂದಿರ ಮತ್ತು ನವೆಂಬರ್ 17ರಂದು ಬ್ರಾಂಪ್ಟನ್ ನ ತ್ರಿವೇಣಿ ಮಂದಿರ' ಎಂದು ಪನ್ನೂನ್ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ. ಇದನ್ನು ಭಾರತ ಖಂಡಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News