ಪ್ಯಾರಿಸ್ ವಿಮಾನ ನಿಲ್ದಾಣ: 40% ವಿಮಾನಗಳ ರದ್ದು
Update: 2025-07-04 23:14 IST
PC | AFP
ಪ್ಯಾರಿಸ್: ಫ್ರಾನ್ಸ್ ನಲ್ಲಿ ವಾಯು ಸಂಚಾರ ನಿಯಂತ್ರಕರ ಮುಷ್ಕರದಿಂದಾಗಿ ಶುಕ್ರವಾರ ಸುಮಾರು 40% ವಿಮಾನಗಳನ್ನು ರದ್ದುಗೊಳಿಸಲಾಗಿದ್ದು ಸಾವಿರಾರು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ವಾಯು ಸಂಚಾರ ನಿಯಂತ್ರಕರು ಗುರುವಾರ ಮುಷ್ಕರ ಆರಂಭಿಸಿದ್ದು ಶುಕ್ರವಾರ ಮುಷ್ಕರ ತೀವ್ರಗೊಳಿಸಿದ್ದರಿಂದ ಪ್ಯಾರಿಸ್‍ನ ಚಾರ್ಲ್ಸ್ ಡಿ ಗೌಲ್, ಓರ್ಲಿ ಮತ್ತು ಬ್ಯೂವೈಸ್ ವಿಮಾನ ನಿಲ್ದಾಣದಿಂದ 40%ದಷ್ಟು ವಿಮಾನಗಳನ್ನು, ಮಾರ್ಸಿಲ್ಲೆ, ಲಿಯಾನ್ ಮತ್ತು ಇತರ ನಗರಗಳ ವಿಮಾನ ನಿಲ್ದಾಣದಿಂದ 30%ದಷ್ಟು ವಿಮಾನಗಳನ್ನು ರದ್ದುಗೊಳಿಸಲು ರಾಷ್ಟ್ರೀಯ ನಾಗರಿಕ ವಿಮಾನಯಾನ ಪ್ರಾಧಿಕಾರ ಸೂಚಿಸಿರುವುದಾಗಿ ವರದಿಯಾಗಿದೆ.