×
Ad

ಪ್ಯಾರಿಸ್: ಪೊಲೀಸ್ ಠಾಣೆಯಲ್ಲೇ ಇಬ್ಬರು ಅಧಿಕಾರಿಗಳಿಗೆ ಗುಂಡೇಟು

Update: 2024-05-10 09:12 IST

Photo: X/MarioNawfal

ಹೊಸದಿಲ್ಲಿ: ಪ್ಯಾರಿಸ್ ನಲ್ಲಿ ಪೊಲೀಸ್ ಠಾಣೆಯಲ್ಲೇ ಇಬ್ಬರು ಅಧಿಕಾರಿಗಳ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಂಧನ ಪ್ರಕ್ರಿಯೆ ವೇಳೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ದಾಳಿ ನಡೆಸಲಾಗಿದೆ ಎಂದು ಎಎಫ್ ಪಿ ವರದಿ ಮಾಡಿದೆ.

ವ್ಯಕ್ತಿಯೊಬ್ಬನನ್ನು ಬಂಧಿಸಿ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಅನಿರೀಕ್ಷಿತವಾಗಿ ದಿಢೀರನೇ ಅಧಿಕಾರಿಯ ಕೈಯಿಂದ ಆರೋಪಿ ಬಂದೂಕು ಕಸಿದುಕೊಂಡು ಪೊಲೀಸ್ ಠಾಣೆ ಆವರಣದಲ್ಲೇ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾನೆ.   

ಗಾಯಗೊಂಡ ಅಧಿಕಾರಿಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ  ಎಂದು ಫ್ರಾನ್ಸ್ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಎಷ್ಟು ಗಂಭೀರ ಗಾಯಗಳಾಗಿವೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಫ್ರಾನ್ಸ್ ರಾಜಧಾನಿಯ 13ನೇ ಜಿಲ್ಲೆಯಲ್ಲಿ ರಾತ್ರಿ 10.30ರ ವೇಳೆಗೆ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News