ಶಸ್ತ್ರಾಸ್ತ್ರ ತಯಾರಿಕೆ ಚುರುಕುಗೊಳಿಸಿ: ರಕ್ಷಣಾ ಸಂಸ್ಥೆಗಳಿಗೆ ಪೆಂಟಗನ್ ನಿರ್ದೇಶನ

Update: 2026-08-09 23:07 IST

 Photo Credit : aljazeera.com

ವಾಶಿಂಗ್ಟನ್, ಆ. 9: ತನ್ನ ಪ್ರಮುಖ ಯುದ್ಧಸಾಮಗ್ರಿ ಸಂಗ್ರಹಗಳನ್ನು ಇರಾನ್ ವಿರುದ್ಧದ ಯುದ್ಧದಿಂದಾಗಿ ಖಾಲಿ ಮಾಡಿಕೊಂಡ ನಂತರ, ಶಸ್ತ್ರಾಸ್ತ್ರ ತಯಾರಿಕೆ ಮತ್ತು ವಿತರಣೆಯನ್ನು ಚುರುಕುಗೊಳಿಸುವಂತೆ ಅಮೆರಿಕದ ರಕ್ಷಣಾ ಸಂಸ್ಥೆಗಳಿಗೆ ಪೆಂಟಗನ್ (ಅಮೆರಿಕದ ರಕ್ಷಣಾ ಇಲಾಖೆ) ನಿರ್ದೇಶನ ನೀಡಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಉಪ ರಕ್ಷಣಾ ಕಾರ್ಯದರ್ಶಿ ಸ್ಟೀವ್ ಫೀನ್ ಬರ್ಗ್ ಅವರು ಬುಧವಾರ ಮೆಮೊ ಮೂಲಕ ರಕ್ಷಣಾ ಉದ್ಯಮದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ನಿರ್ಣಾಯಕ ಸಾಮರ್ಥ್ಯಗಳಿಗಾಗಿ ಗಮನಾರ್ಹವಾಗಿ ವೇಗವಾದ, ಹೆಚ್ಚು ಆಕ್ರಮಣಕಾರಿ ವಿತರಣಾ ವೇಳಾಪಟ್ಟಿಗಳು ಮತ್ತು ಉತ್ಪಾದನೆ ಹೆಚ್ಚಿಸುವ ಗುರಿಯಾಗಿಟ್ಟುಕೊಂಡ ಯೋಜನೆಗಳನ್ನು ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News