ಶ್ವೇತಭವನ ಸಭಾಂಗಣ ಯೋಜನೆಗೆ ಅಮೆರಿಕದ ನ್ಯಾಯಾಲಯ ತಡೆ

Update: 2026-08-08 21:24 IST

Photo Credit : AP 

ವಾಶಿಂಗ್ಟನ್, ಆ.8: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 40 ದಶಲಕ್ಷ ಡಾಲರ್ ವೆಚ್ಚದ ಪ್ರಸ್ತಾವಿತ ಶ್ವೇತಭವನದ ಬಾಲ್ ರೂಂ(ಬೃಹತ್ ಸಭಾಂಗಣ) ನಿರ್ಮಾಣವನ್ನು ತಕ್ಷಣವೇ ತಡೆಹಿಡಿಯುವಂತೆ ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯವು ಶುಕ್ರವಾರ ಆಡಳಿತಕ್ಕೆ ಆದೇಶಿಸಿದೆ .

`ಇಷ್ಟೊಂದು ವೆಚ್ಚದ ಬೃಹತ್ ಬಾಲ್ ರೂಂ ನಿರ್ಮಾಣ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಸಂಸತ್ತು ನಿರ್ಧರಿಸಬೇಕೇ ಹೊರತು, ಇದು ಕಾರ್ಯಾಂಗವು ತನ್ನಿಷ್ಟದಂತೆ ಮಾಡುವ ವಿಷಯವಲ್ಲ' ಎಂದು ಪೀಠದ ಬಹುಮತದ ತೀರ್ಪು ಹೇಳಿದೆ. `ಪ್ರತಿ ಅಧ್ಯಕ್ಷರೂ ಶ್ವೇತಭವನ ಮತ್ತು ಅದರ ಅಧಿಕೃತ ನಿವಾಸದ ತಾತ್ಕಾಲಿಕ ಬಾಡಿಗೆದಾರರೇ ಹೊರತು ಮಾಲಕರಲ್ಲ. ಪ್ರಸ್ತುತ ಮತ್ತು ಭವಿಷ್ಯದ ಎಲ್ಲಾ ಅಧ್ಯಕ್ಷರ ಹಾಗೂ ಅಮೆರಿಕದ ಜನರ ಬಳಕೆಗಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ವಹಿಸಲ್ಪಡುವ ಈ ಆಸ್ತಿಯ ಮೇಲೆ ಅಧ್ಯಕ್ಷರಿಗೆ ಯಾವುದೇ ಸಂವಿಧಾನಾತ್ಮಕ ಅಧಿಕಾರವಿಲ್ಲ ಮತ್ತು ಅವರು ಅಂತಹ ಅಧಿಕಾರವನ್ನು ಪ್ರತಿಪಾದಿಸುವಂತೆಯೂ ಇಲ್ಲ' ಎಂದು ಮೂವರು ನ್ಯಾಯಾಧೀಶರ ಪೀಠವು ಸ್ಪಷ್ಟಪಡಿಸಿದೆ.

ಸಂಸತ್ತಿನ ಅನುಮೋದನೆ ಪಡೆಯದೆ ಬಾಲ್ ರೂಂ ಯೋಜನೆಗಾಗಿ ಆಡಳಿತವು ಕಳೆದ ವರ್ಷ ಶ್ವೇತಭವನದ `ಈಸ್ಟ್ ವಿಂಗ್' ಭಾಗವನ್ನು ಕೆಡವಿದ ನಂತರ `ನ್ಯಾಷನಲ್ ಟ್ರಸ್ಟ್ ಫಾರ್ ಹಿಸ್ಟಾರಿಕ್ ಪ್ರಿಸರ್ವೇಶನ್' ಸಲ್ಲಿಸಿದ್ದ ದಾವೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಈ ತೀರ್ಪು ಎತ್ತಿಹಿಡಿದಿದೆ ಎಂದು ಬಿಬಿಸಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News