ಹಾರ್ಮುಝ್ ಜಲಸಂಧಿ | UAE ತೈಲ ನೌಕೆ ಮೇಲೆ ಕ್ಷಿಪಣಿ ದಾಳಿ

Update: 2026-08-08 21:18 IST

Photo Credit : indiatoday.in

ಅಬುಧಾಬಿ, ಆ.8: ಶನಿವಾರ ಬೆಳಗ್ಗೆ ಹಾರ್ಮುಝ್ ಜಲಸಂಧಿಯ ಮಾರ್ಗವಾಗಿ ಸಾಗುತ್ತಿದ್ದ ತನಗೆ ಸೇರಿದ ತೈಲ ನೌಕೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿ (ಅಡ್ನಾಕ್) ತಿಳಿಸಿದೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು `ಅಡ್ನಾಕ್' ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಬುಧಾಬಿಯ ಸರ್ಕಾರಿ ಸ್ವಾಮ್ಯದ ಈ ತೈಲ ಸಂಸ್ಥೆಯು ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕರಲ್ಲಿ ಒಂದಾಗಿದ್ದು, ಜಾಗತಿಕ ಗ್ರಾಹಕರಿಗೆ ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ಈ ದಾಳಿಯು ಭದ್ರತಾ ಮಂಡಳಿಯ ನಿರ್ಣಯ 2817 ರ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ಯುಎಇ ವಿದೇಶಾಂಗ ಸಚಿವಾಲಯವು ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News