×
Ad

ಫಿಲಿಪ್ಪೀನ್ಸ್: ಬಂಡುಕೋರರ ವಿರುದ್ಧ ಕಾರ್ಯಾಚರಣೆ ಸಂದರ್ಭ ಯುದ್ಧವಿಮಾನ ನಾಪತ್ತೆ

Update: 2025-03-04 20:59 IST

Philippine Air Force FA-50 fighter jets (ಸಾಂದರ್ಭಿಕ ಚಿತ್ರ) - Image Source : AP

ಮನಿಲಾ: ದಕ್ಷಿಣ ಮಿಂಡನಾವೊ ಪ್ರದೇಶದಲ್ಲಿ ಕಮ್ಯುನಿಸ್ಟ್ ಬಂಡುಕೋರ ಗುಂಪಿನ ವಿರುದ್ಧದ ಕಾರ್ಯಾಚರಣೆಯ ಸಂದರ್ಭ ಫಿಲಿಪ್ಪೀನ್ಸ್‍ನ ಯುದ್ಧವಿಮಾನ ನಾಪತ್ತೆಯಾಗಿರುವುದಾಗಿ ಮಿಲಿಟರಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಮಿಂಡನಾವೋದ ಬುಕಿಡ್ನಾನ್ ಪ್ರಾಂತದಲ್ಲಿ ಕಮ್ಯುನಿಸ್ಟ್ ಬಂಡುಕೋರರ(ನ್ಯೂ ಪೀಪಲ್ಸ್ ಆರ್ಮಿ) ವಿರುದ್ಧ ಹೋರಾಡುತ್ತಿರುವ ಪದಾತಿ ದಳಕ್ಕೆ ವಾಯು ಕ್ಷೇತ್ರದಲ್ಲಿ ಬೆಂಬಲ ಒದಗಿಸಲು ರವಾನಿಸಲಾಗಿದ್ದ ತುಕಡಿಯ ಭಾಗವಾಗಿದ್ದ ಎಫ್‍ಎ-50 ಯುದ್ಧವಿಮಾನ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ಫಿಲಿಪ್ಪೀನ್ಸ್ ವಾಯುಪಡೆಯ ವಕ್ತಾರೆ ಕ| ಕಾನ್ಸುವೆಲೊ ಕ್ಯಾಸ್ಟಿಲೊರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News