×
Ad

ಸೌದಿ ಅರೆಬಿಯಾದ ಗ್ರ್ಯಾಂಡ್ ಮುಫ್ತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Update: 2025-09-24 21:35 IST

ಶೇಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ , ನರೇಂದ್ರ ಮೋದಿ | PTI

ಹೊಸದಿಲ್ಲಿ, ಸೆ.24: ಸೌದಿ ಅರೆಬಿಯಾದ ಗ್ರ್ಯಾಂಡ್ ಮುಫ್ತಿ ಹಾಗೂ ಹಿರಿಯ ವಿದ್ವಾಂಸರ ಮಂಡಳಿಯ ಮುಖ್ಯಸ್ಥ ಶೇಖ್ ಅಬ್ದುಲ್ ಅಝೀಝ್ ಬಿನ್ ಅಬ್ದುಲ್ಲಾ ಬಿನ್ ಮುಹಮ್ಮದ್ ಅಲ್ ಅಲ್‍ಶೇಖ್(82 ವರ್ಷ) ಮಂಗಳವಾರ ನಿಧನರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಾಪ ವ್ಯಕ್ತಪಡಿಸಿದ್ದಾರೆ.

` ಸೌದಿ ಅರೆಬಿಯಾ ಗ್ರ್ಯಾಂಡ್ ಮುಫ್ತಿಯವರ ನಿಧನದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಈ ದುಃಖದ ಸಂದರ್ಭದಲ್ಲಿ ನಮ್ಮ ಪ್ರಾರ್ಥನೆಗಳು ಸೌದಿ ರಾಷ್ಟ್ರ ಮತ್ತು ಅಲ್ಲಿನ ಜನರೊಂದಿಗೆ ಇರುತ್ತದೆ' ಎಂದು ಮೋದಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News