ಬ್ರಿಟನ್‌ನಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ : 474 ಮಂದಿ ಬಂಧನ
ಸಾಂದರ್ಭಿಕ ಚಿತ್ರ (credit: AFP)
ಲಂಡನ್, ಆ.10: ಗಾಝಾ ಕಾರ್ಯಾಚರಣೆ ತೀವ್ರಗೊಳಿಸುವ ಇಸ್ರೇಲ್ ಸರಕಾರದ ನಿರ್ಧಾರವನ್ನು ವಿರೋಧಿಸಿ ಮತ್ತು ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳ ತಕ್ಷಣ ಬಿಡುಗಡೆಯ ನಿಟ್ಟಿನಲ್ಲಿ ಇಸ್ರೇಲ್ ಸರಕಾರ ಕದನ ವಿರಾಮಕ್ಕೆ ಸಮ್ಮತಿಸುವಂತೆ ಆಗ್ರಹಿಸಿ ಲಂಡನ್‌ನಲ್ಲಿ ರವಿವಾರ ಬೃಹತ್ ಪ್ರತಿಭಟನೆ ನಡೆದಿರುವುದಾಗಿ ವರದಿಯಾಗಿದೆ.
ಫೆಲೆಸ್ತೀನೀಯರ ಹಕ್ಕುಗಳ ಪರ ಧ್ವನಿ ಎತ್ತುವ `ಫೆಲೆಸ್ತೀನ್ ಆ್ಯಕ್ಷನ್' ಎಂಬ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ನಿಯೋಜಿಸುವ ನಿರ್ಣಯವನ್ನು ಕಳೆದ ತಿಂಗಳು ಇಸ್ರೇಲ್ ಸರಕಾರ ಅಂಗೀಕರಿಸಿದ್ದು ಈ ಗುಂಪನ್ನು ಬೆಂಬಲಿಸುವುದು ಕಾನೂನು ಬಾಹಿರ ಕೃತ್ಯ ಎಂದು ಘೋಷಿಸಿದೆ. ಇಸ್ರೇಲ್ ಸರಕಾರದ ನಿರ್ಧಾರವನ್ನು ಖಂಡಿಸಿ ಶನಿವಾರ ಲಂಡನ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭ 474 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಈ ಬಂಧನವನ್ನು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡಿಸಿದ್ದು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿರುವುದು ಕಾನೂನಿಗೆ ವಿರುದ್ಧವಾಗಿದ್ದು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.