×
Ad

ಪೋಪ್‌ ಫ್ರಾನ್ಸಿಸ್‌ ಆರೋಗ್ಯ ಸ್ಥಿತಿ ಸ್ಥಿರ: ವ್ಯಾಟಿಕನ್‌

Update: 2025-02-20 11:24 IST

ಪೋಪ್ ಫ್ರಾನ್ಸಿಸ್ (Photo: PTI)

ವ್ಯಾಟಿಕನ್‌ ಸಿಟಿ: ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ರಕ್ತ ಪರೀಕ್ಷೆಗಳು ಸ್ವಲ್ಪ ಸುಧಾರಣೆಯನ್ನು ತೋರಿಸುತ್ತಿವೆ ಎಂದು ವ್ಯಾಟಿಕನ್‌ ವಕ್ತಾರರು ತಿಳಿಸಿದ್ದಾರೆ.

ನ್ಯುಮೋನಿಯಾ ಮತ್ತು ಶ್ವಾಸನಾಳದ ಸೋಂಕು ಹೊಂದಿರುವ ಪೋಪ್‌ ಅವರು ಕಳೆದ ಆರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈದ್ಯಕೀಯ ಪರೀಕ್ಷೆ ವೇಳೆ ಶ್ವಾಸಕೋಶದಲ್ಲಿ ಡಬಲ್ ನ್ಯುಮೋನಿಯಾ ಮತ್ತು ಆಸ್ತಮಾ ಬ್ರಾಂಕೈಟಿಸ್ ಇದೆ ಎಂದು ದೃಢಪಟ್ಟಿತ್ತು. ಇದೀಗ, ಚೇತರಿಸಿಕೊಂಡಿರುವ ಪೋಪ್ ಫ್ರಾನ್ಸಿಸ್ ಹಾಸಿಗೆಯಿಂದ ಎದ್ದು, ಊಟ ಮಾಡಿದ್ದಾರೆ ಎಂದು ವ್ಯಾಟಿಕನ್ ತಿಳಿಸಿದೆ.

88 ವರ್ಷದ ಪೋಪ್ ಫ್ರಾನ್ಸಿಸ್ ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದು, ಇದು ಅವರ ಆರೋಗ್ಯ ಸ್ಥಿತಿಯನ್ನು ಬಿಗಡಾಯಿಸಿದೆ ಎಂದು ವೈದ್ಯರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News