ಇಂಡೋನೇಶ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬೊವೊ ಸುಬಿಯಾಂತೊ ಗೆಲುವು: ವರದಿ
Update: 2024-02-15 23:36 IST
Photo Credit: AP
ಜಕಾರ್ತ: ವಿಶ್ವದ ಮೂರನೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಇಂಡೊನೇಶ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂತೋ ಭರ್ಜರಿ ಮುನ್ನಡೆ ದಾಖಲಿಸಿದ್ದು ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರಕಾರ ಅನುಮೋದಿಸಿದ ಅಧಿಕಾರಿಗಳು ನಡೆಸಿದ ಪ್ರಾಥಮಿಕ ಮತ ಎಣಿಕೆಯಲ್ಲಿ ಮಾಜಿ ಜನರಲ್ ಸುಬಿಯಾಂತೋ ಗೆಲುವನ್ನು ಘೋಷಿಸಲಾಗಿದೆ. ಇದುವರೆಗೆ 43.5%ದಷ್ಟು ಮತಗಳನ್ನು ಎಣಿಸಲಾಗಿದ್ದು ಇದರಲ್ಲಿ ಸುಬಿಯಾಂತೊ 57% ಮತಗಳನ್ನು ಪಡೆದಿದ್ದು ತಮ್ಮ ನಿಕಟ ಪ್ರತಿಸ್ಪರ್ಧಿಗಿಂತ ದುಪ್ಪಟ್ಟು ಮತಗಳನ್ನು ಪಡೆದಿದ್ದಾರೆ ಎಂದು ಘೋಷಿಸಲಾಗಿದೆ.
ಈ ಗೆಲುವು ಇಂಡೋನೇಶ್ಯಾದ ಜನತೆಯ ಗೆಲುವಾಗಿದೆ ಎಂದು ಸುಬಿಯಾಂತೋ ಜಕಾರ್ತದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.