×
Ad

ವಾರ್ಸಾ ತಲುಪಿದ ಪ್ರಧಾನಿ ಮೋದಿ

Update: 2024-08-21 22:20 IST

 ನರೇಂದ್ರ ಮೋದಿ | PC : PTI 

ವಾರ್ಸಾ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪೋಲ್ಯಾಂಡ್‍ಗೆ ಐತಿಹಾಸಿಕ ಭೇಟಿಗಾಗಿ ಬುಧವಾರ ರಾಜಧಾನಿ ವಾರ್ಸಾ ತಲುಪಿದ್ದಾರೆ. ರಶ್ಯ-ಉಕ್ರೇನ್ ಯುದ್ಧಕ್ಕೆ ಶಾಂತಿಯುತ ಪರಿಹಾರ ಅಭಿಯಾನದ ಅಂಗವಾಗಿ ಅವರು ಈ ವಾರಾಂತ್ಯ ಉಕ್ರೇನ್‍ಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

45 ವರ್ಷಗಳಲ್ಲಿ ಪೋಲ್ಯಾಂಡ್‍ಗೆ ಭೇಟಿ ನೀಡಿದ ಪ್ರಥಮ ಭಾರತೀಯ ಪ್ರಧಾನಿಯಾಗಿರುವ ಮೋದಿ ಗುರುವಾರ ಪೋಲ್ಯಾಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ಡ್ಯೂಡಾರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಬಳಿಕ ಪೋಲ್ಯಾಂಡ್‍ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳ ಜತೆ ಸಂವಾದ ನಡೆಸುವ ಕಾರ್ಯಕ್ರಮವಿದೆ. ಪೋಲ್ಯಾಂಡ್‍ಗೆ ಭಾರತದ ಜತೆ ಶಾಶ್ವತ ಪಾಲುದಾರಿಕೆಯ ಅಗತ್ಯವಿದೆ ಎಂದು ಪೋಲ್ಯಾಂಡ್‍ನ ಉಪಪ್ರಧಾನಿ ವ್ಲಾಡಿಸ್ಲಾವ್ ಕೊಸಿನಿಯಾಕ್ ಮೋದಿಯವರ ಆಗಮನಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News